ನವದೆಹಲಿ: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ಹಣಕಾಸು ವರ್ಷ 2018-20ರ ಅವಧಿಯಲ್ಲಿ 3.8 ಲಕ್ಷಕ್ಕೂ ಹೆಚ್ಚು ಶೆಲ್ ಕಂಪನಿಗಳನ್ನು ಗುರುತಿಸಿ ಅವುಗಳಿಗೆ ಬೀಗ ಜಡಿದಿದೆ.
ಕಂಪೆನಿ ಕಾಯ್ದೆ, 2013 ರಲ್ಲಿ “ಶೆಲ್ ಕಂಪನಿ” ಎಂಬ ಪದಕ್ಕೆ ಯಾವುದೇ ವ್ಯಾಖ್ಯಾನವಿಲ್ಲ ಎಂದು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
ಇದು ಸಾಮಾನ್ಯವಾಗಿ ಸಕ್ರಿಯ ವ್ಯಾಪಾರ ಕಾರ್ಯಾಚರಣೆಯಿಲ್ಲದ ಅಥವಾ ಗಮನಾರ್ಹ ಮಟ್ಟದ ಸ್ವತ್ತುಗಳಿಲ್ಲದ ಕಂಪನಿಯನ್ನು ಸೂಚಿಸುತ್ತದೆ, ಕೆಲವು ಸಂದರ್ಭಗಳಲ್ಲಿ ತೆರಿಗೆ ವಂಚನೆ, ಹಣಕಾಸು ವಂಚನೆ, ಮಾಲೀಕತ್ವವನ್ನು ಅಸ್ಪಷ್ಟಗೊಳಿಸುವುದು, ಬೇನಾಮಿ ಮುಂತಾದ ಕಾನೂನುಬಾಹಿರ ಉದ್ದೇಶಗಳಿಗಾಗಿ ಇವುಗಳನ್ನು ಬಳಸಲಾಗುತ್ತದೆ.
“ಶೆಲ್ ಕಂಪೆನಿಗಳ” ಸಮಸ್ಯೆಯನ್ನು ಪರಿಶೀಲಿಸಲು ಸರ್ಕಾರ ಸ್ಥಾಪಿಸಿದ ವಿಶೇಷ ಕಾರ್ಯಪಡೆಯು ಶೆಲ್ ಕಂಪನಿಗಳನ್ನು ಗುರುತಿಸಲು ಕೆಲವು ರೆಡ್ ಫ್ಲ್ಯಾಗ್ ಸೂಚಕಗಳನ್ನು ಎಚ್ಚರಿಕೆಗಳಾಗಿ ಬಳಸಲು ಶಿಫಾರಸು ಮಾಡಿದೆ. ಅಂತಹ ಕಂಪನಿಗಳನ್ನು ಗುರುತಿಸಲು ಮತ್ತು ಮುಚ್ಚಲು ಸರ್ಕಾರ ವಿಶೇಷ ಅಭಿಯಾನ ನಡೆಸಿದೆ” ಎಂದರು.
“ಎರಡು ವರ್ಷಗಳ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಸತತವಾಗಿ ಹಣಕಾಸು ಸ್ಟೇಟ್ಮೆಂಟ್ (ಎಫ್ಎಸ್) ಸಲ್ಲಿಸದಿರುವ ಆಧಾರದ ಮೇಲೆ ‘ಶೆಲ್ ಕಂಪನಿಗಳನ್ನು’ ಗುರುತಿಸಲಾಗಿದೆ ಮತ್ತು ಕಾನೂನಿನ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿದ ನಂತರ, ಕಳೆದ ಮೂರು ವರ್ಷಗಳಲ್ಲಿ 3,82,875 ಸಂಖ್ಯೆಯ ಕಂಪನಿಗಳು 2020 ಕ್ಕೆ ಕೊನೆಗೊಂಡ ವರ್ಷದ ವೇಳೆಗೆ ಮುಚ್ಚಲ್ಪಟ್ಟಿವೆ” ಎಂದು ಠಾಕೂರ್ ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಯಾವುದೇ ಕಂಪನಿಗಳನ್ನು ಮುಚ್ಚಲಾಗಿಲ್ಲ ಎಂದು ಸಚಿವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.