ಕೊಲಂಬೋ: ಶ್ರೀಲಂಕಾ ರಾಜಧಾನಿ ಕೊಲಂಬೋದ ಗ್ಯಾಲಿ ಫೇಸ್ನಲ್ಲಿ ನಡೆದ ವಾಯು ಪ್ರದರ್ಶನದಲ್ಲಿ ಸೂರ್ಯಕಿರಣ್ ಮತ್ತು ಸಾರಂಗ್ ಏರೋಬ್ಯಾಟಿಕ್ ಪ್ರದರ್ಶನ ತಂಡಗಳು ಮತ್ತು ತೇಜಸ್ ಎಲ್ಸಿಎ ಒಳಗೊಂಡ ಭಾರತೀಯ ವಾಯುಸೇನಾ ತುಕಡಿಗಳು ಭಾಗವಹಿಸಿದವು.
ಭಾರತೀಯ ವಾಯುಸೇನಾ ಮುಖ್ಯಸ್ಥ ಮಾರ್ಷಲ್ ಆರ್ಕೆಸ್ ಭದೌರಿಯಾ ಎರಡು ದಿನಗಳ ಭೇಟಿಗಾಗಿ ಕೊಲಂಬೊಗೆ ಆಗಮಿಸಿ ಶ್ರೀಲಂಕಾದ ವಾಯುಪಡೆಯ (ಎಸ್ಎಲ್ಎಎಫ್) 70 ನೇ ವಾರ್ಷಿಕೋತ್ಸವವನ್ನು ಆಚರಿಸುವ ವಾಯು ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಮಾರ್ಚ್ 2 ರಂದು ಶ್ರೀಲಂಕಾದ ವಾಯುಪಡೆಯು ತನ್ನ ವಾರ್ಷಿಕೋತ್ಸವವನ್ನು ಆಚರಿಸಿದೆ ಮತ್ತು ಈ ಸಂದರ್ಭದ ನೆನಪಿಗಾಗಿ ಏರ್ ಶೋ ನಡೆಸಿದೆ.
ಶ್ರೀಲಂಕಾದ ವಾಯುಪಡೆಯನ್ನು 1951 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಶ್ರೀಲಂಕಾದ ಅಂತರ್ಯುದ್ಧದಾದ್ಯಂತ ಪ್ರಮುಖ ಪಾತ್ರ ವಹಿಸಿತ್ತು. ಇದು 160 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತಿದೆ ಮತ್ತು 27,000 ಕ್ಕೂ ಹೆಚ್ಚು ವಾಯುಪಡೆ ಸಿಬ್ಬಂದಿ ಮತ್ತು 1,300 ಅಧಿಕಾರಿಗಳ ತರಬೇತಿ ಪಡೆದ ಸಾಮರ್ಥ್ಯವನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.