ಬಾಲಿವುಡ್ ನಟಿ, ಎಡಪಂಥೀಯರ ನಾಯಕಿ ಸ್ವರಾ ಭಾಸ್ಕರ್ ಅವರು ಕುತುಬುದ್ದೀನ್ ಅನ್ಸಾರಿ ಅವರ ಚಿತ್ರವನ್ನು ಹಂಚಿಕೊಂಡು ʼಎಂದಿಗೂ ಮರೆಯದಿರಿʼ ಎಂದು ಟ್ವಿಟ್ ಮಾಡಿದ್ದಾರೆ. ಅನ್ಸಾರಿ ಫೋಟೋ 2002ರ ಗೋಧ್ರಾ ಹತ್ಯಾಕಾಂಡದ ಸಾಂಕೇತಿಕ ಚಿತ್ರವಾಗಿತ್ತು. ಆದರೆ ಸ್ವರಾ ಅವರಂತಹ ಜನರು ಅಪರಾಧವನ್ನು ಎಷ್ಟು ಸೆಲೆಕ್ಟಿವ್ ಆಗಿ ನೆನಪಿಸಿಕೊಳ್ಳುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ. ಗೋಧ್ರಾ ಹಿಂಸೆಗೂ ಮುಂಚೆ ನಡೆದ 59 ಹಿಂದೂಗಳು ಜೀವಂತ ಸುಡುವಿಕೆಯ ಅಪರಾಧ ಇವರಿಗೆ ನೆನಪಿಸಿಕೊಳ್ಳುವ ಒಂದು ಘಟನೆಯೇ ಅಲ್ಲ.
ಸ್ವರಾ ಹಂಚಿಕೊಂಡ ಚಿತ್ರದಲ್ಲಿ, ಆಗ 28 ವರ್ಷ ವಯಸ್ಸಿನ ಅನ್ಸಾರಿ ರಕ್ತದಿಂದ ಕಲೆಯಿಂದ ಕೂಡಿದ್ದ ಶರ್ಟ್ ಧರಿಸಿ, ಕಿರಿದಾದ ವರಾಂಡದಲ್ಲಿ ನಿಂತಿದ್ದಾರೆ, ಅವರ ನೀರು ತುಂಬಿದ ಕಣ್ಣುಗಳು ಭಯದಿಂದ ಕೂಡಿವೆ. ಅವರ ಕೈಗಳು ನಮಸ್ಕಾರದ ಅಭಿವ್ಯಕ್ತಿಯಲ್ಲಿ ಮಡಚಿವೆ, ಬಾಯಿ ಏನೋ ದುಃಖ ತೋಡಿಕೊಳ್ಳುವಂತಿದೆ. ಭಯ ಮತ್ತು ಅಸಹಾಯಕತೆಯಲ್ಲಿ ಆತನಿದ್ದಾನೆ. ಆದರೆ ಸ್ವರಾ ಆ ಸಂದರ್ಭದಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ಸಲೀಸಾಗಿ ಮರೆತುಬಿಟ್ಟಿದ್ದಾರೆ. ಆಕೆಗೆ ಚಿತ್ರವಷ್ಟೇ ಮುಖ್ಯ.
27 ಫೆಬ್ರವರಿ 2002 ರ ಬೆಳಿಗ್ಗೆ, ಅಯೋಧ್ಯೆಯಿಂದ ಹಿಂದಿರುಗಿದ 59 ಹಿಂದೂ ಯಾತ್ರಾರ್ಥಿಗಳು ಮತ್ತು ಕರಸೇವಕರು ಸಬರಮತಿ ಎಕ್ಸ್ಪ್ರೆಸ್ ಗೋಧ್ರಾ ರೈಲು ನಿಲ್ದಾಣದ ಬಳಿ ರೈಲಿನೊಳಗಿನ ಬೆಂಕಿ ಹೊತ್ತಿಕೊಂಡ ಪರಿಣಾಮ ಸಾವನ್ನಪ್ಪಿದರು. ಘಟನೆಯ ನಂತರ, ತನಿಖೆಗಾಗಿ ಗುಜರಾತ್ ಸರ್ಕಾರವು ಆಯೋಗವನ್ನು ಸ್ಥಾಪಿಸಿತ್ತು, ಇದು 6 ವರ್ಷಗಳ ನಂತರ ವರದಿ ನೀಡಿತ್ತು ಮತ್ತು ಅಂತಿಮವಾಗಿ ಬೆಂಕಿಯು ಮುಸ್ಲಿಂ ಜನಸಮೂಹವೊಂದು ನಡೆಸಿದ ಅಗ್ನಿಸ್ಪರ್ಶದ ಪರಿಣಾಮವಾಗಿ ಹೊತ್ತಿಕೊಂಡಿತು ಎಂದು ತೀರ್ಪು ಹೊರಬಂತು.
ಸ್ವರ ಅವರು ಅನ್ಸಾರಿಯ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಇಸ್ಲಾಮಿಕ್ ಹಿಂಸೆಕೋರರ ಪರ ನಿಲ್ಲುವ ತನ್ನ ನಿಜವಾದ ಬಣ್ಣವನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಗೋಧ್ರಾ ಹಿಂಸೆಯ ಸಮಯದಲ್ಲಿ ಹಿಂದೂಗಳಿಗೆ ಏನಾಯಿತು ಎಂಬುದನ್ನು ಅವರು ತುಂಬಾ ಸೂಕ್ತವಾಗಿಯೇ ಮರೆತಿದ್ದಾರೆ. ಹಿಂದೂಗಳನ್ನು ಜೀವಂತವಾಗಿ ಸುಡಲಾದ ಬಗ್ಗೆ, ದೆಹಲಿಯಲ್ಲಿ ಇತ್ತೀಚಿಗೆ ನಡೆದ ಗಲಭೆಯಲ್ಲಿ ಐಬಿ ಅಧಿಕಾರಿ ಅಂಕಿತ್ ಶರ್ಮಾ ಅವರಿಗೆ ಏನಾಯಿತು ಎಂಬುದನ್ನು ಅವರು ಮರೆತುಬಿಟ್ಟಿದ್ದಾರೆ, ಆತನ ಮೆದುಳು ಮತ್ತು ಶ್ವಾಸಕೋಶವನ್ನು ಕತ್ತರಿಸಿ ಹಿಂಸಿಸಿದ್ದು ಆಕೆಗೆ ಸಂಗತಿಯೇ ಅಲ್ಲ. ರಿಂಕು ಶರ್ಮಾನಿಗೆ ಏನಾಯಿತು ಎಂಬುದನ್ನು ಆಕೆ ಮರೆತುಬಿಟ್ಟಿದ್ದಾಳೆ. ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹ ಅಭಿಯಾನ ಚಾಲನೆಯಲ್ಲಿದ್ದಾಗ ಆತ ಇರಿತಕ್ಕೊಳಗಾಗಿದ್ದ. 2008 ರಲ್ಲಿ ಮುಂಬೈ ನಗರಕ್ಕೆ ಏನಾಯಿತು ಎಂಬುದನ್ನು ಕೂಡ ಸ್ವರಾ ಬೇಕೆಂದೇ ಮರೆತುಬಿಟ್ಟಿದ್ದಾಳೆ ! ಈ ಘಟನೆಗಳಲ್ಲಿ ತಪ್ಪು ಮಾಡಿದವರು ಯಾರು? ವಾಸ್ತವವಾಗಿ ಎಲ್ಲಾ ವಿಷಯದಲ್ಲೂ ಯಾರು ತಪ್ಪೆಂದು ಆಕೆ ಭಾವಿಸುತ್ತಾರೆ? ಸರ್ಕಾರ, ಹಿಂದೂಗಳು ಅಥವಾ ಬಿಜೆಪಿ?
ಇಸ್ಲಾಮಿಕ್ ಹಿಂಸಾಚಾರವನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುವುದು, ಅವರ ಹಿಂಸೆಯನ್ನು ವೈಟ್ವಾಶ್ ಮಾಡುವುದು ಈಕೆಯ ಛಾಳಿ. ಕಳೆದ ವರ್ಷ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ, ಈಶಾನ್ಯದ ಬೀದಿಗಳಲ್ಲಿ ಭೀಕರ ಹಿಂದೂ ವಿರೋಧಿ ಹಿಂಸಾಚಾರವನ್ನು ಭುಗಿಲೆಬ್ಬಿಸಿದ ಪ್ರಧಾನ ಆರೋಪಿ ಉಮರ್ ಖಾಲಿದ್ ಅನ್ನು ಬೆಂಬಲಿಸುವ ಗುತ್ತಿಗೆಯನ್ನು ಇವರೇ ಪಡೆದುಕೊಂಡಿದ್ದಾರೆ. “ದೆಹಲಿ, ಬೀದಿಗಿಳಿ! ಭಜರಂಗದಳದ ಕಾರ್ಯಕರ್ತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತಲುಪಿ” ಎಂದು ಹಿಂಸಾಚಾರವನ್ನು ಪ್ರಚೋದಿಸುವ ಪ್ರಯತ್ನವನ್ನು ಅವರು ಟ್ವೀಟ್ ಮೂಲಕ ಮಾಡಿದ್ದರು. ಹೌದು, ಅವಳಿಗೆ ಈ ನೆನಪು ಮಾಸಿದಂತಿದೆ.
ಅಷ್ಟಕ್ಕೂ 2016 ರಲ್ಲಿ, ಅನ್ಸಾರಿ ಅವರೇ ಸ್ವತಃ ರಾಜಕೀಯ ಪಕ್ಷಗಳು ಮತ್ತು ಪಟ್ಟಭದ್ರ ಹಿತಾಸಕ್ತಿಯನ್ನು ಹೊಂದಿರುವ ಜನರಿಗೆ ರಾಜಕೀಯ ಲಾಭ ಮತ್ತು ಪ್ರಚಾರದ ಉದ್ದೇಶಗಳಿಗಾಗಿ ನನ್ನ ಫೋಟೋ ಬಳಸುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದರು. ಮುಂಬೈ ಮಿರರ್ಗೆ ನೀಡಿದ ಸಂದರ್ಶನದಲ್ಲಿ ಅನ್ಸಾರಿ ಅವರು, “ನನಗೆ 43 ವರ್ಷ ಮತ್ತು ಕಳೆದ 14 ವರ್ಷಗಳಲ್ಲಿ ರಾಜಕೀಯ ಪಕ್ಷಗಳು, ಬಾಲಿವುಡ್ ಮತ್ತು ಭಯೋತ್ಪಾದಕ ಸಂಘಟನೆಗಳು ನನ್ನನ್ನು ಬಳಸಿಕೊಂಡಿವೆ ಮತ್ತು ದುರುಪಯೋಗಪಡಿಸಿಕೊಂಡಿವೆ” ಎಂದು ಅಳಲು ತೋಡಿಕೊಂಡಿದ್ದರು. “ಅಪ್ಪ, ನೀವು ಯಾಕೆ ಚಿತ್ರದಲ್ಲಿ ಅಳುತ್ತಿದ್ದೀರಿ ಮತ್ತು ಭಿಕ್ಷೆ ಬೇಡುತ್ತಿದ್ದೀರಿ” ಎಂದು ನನ್ನನ್ನು ನನ್ನ ಮಕ್ಕಳು ಪ್ರತಿ ಸಲ ಕೇಳಿದಾಗ ನನಗೆ ಉತ್ತರಿಸಲು ಸಾಧ್ಯವಾಗದ ಕಾರಣ ನಾನು 2002 ರಲ್ಲೇ ಮರಣ ಹೊಂದಿದ್ದರೆ ಒಳ್ಳೆಯದಿತ್ತು ಎಂದು ಬಯಸುತ್ತೇನೆ” ಎಂದಿದ್ದರು.
ವಿಶಿಷ್ಟ ರೀತಿಯ ಪ್ರಚಾರ ಪ್ರಿಯೆ ಆಗಿರುವ ಸ್ವರಾ ವ್ಯಕ್ತಿಯ ಮನವಿಗೆ ಸ್ಪಂದಿಸುವ ಗೊಡವೆಗೆ ಹೋಗದೆ ಕೇವಲ ಫೋಟೋ ಹಂಚಿಕೊಂಡು ತನ್ನ ಛಾಳಿ ಮುಂದುವರೆಸಿದ್ದಾರೆ. ಗೋಧ್ರಾ ರೈಲು ಸುಟ್ಟ ಘಟನೆಗಳಲ್ಲಿ ಹಿಂದೂಗಳ ಹತ್ಯಾಕಾಂಡವನ್ನು ನೆನಪಿಸದ ಎಡ-ಒಲವಿನ ಉದಾರವಾದಿಗಳು ಪಾಪದ ಮನುಷ್ಯನ ಮನವಿಗೆ ಜಾಣ ಕಿವುಡತನ ಪ್ರದರ್ಶಿಸಿ ಆತನ ಫೋಟೋ ಹಂಚಿಕೊಂಡು ತಮ್ಮ ಹಿಡೆನ್ ಅಜೆಂಡಾವನ್ನು ಮುಂದಿಟ್ಟಿದ್ದಾರೆ. ಇದು ಎಡ-ಲಿಬರಲ್ ಪ್ಲೇಬುಕ್ನ ಒಂದು ಶ್ರೇಷ್ಠ ಟ್ರಿಕ್ ಆಗಿದೆ, ಇಲ್ಲಿ ಎಡ ಸಿದ್ಧಾಂತದ ಅನುಯಾಯಿಗಳು ಇಸ್ಲಾಮಿಕ್ ಹಿಂಸಾಚಾರವನ್ನು ರಕ್ಷಿಸಲು ಅಮಾಯಕ ಜನರ ಸಾವು ಮತ್ತು ನೋವುಗಳನ್ನು ಬಳಸಿಕೊಳ್ಳುತ್ತಾರೆ.
Source : www.newsbharati.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.