ನವದೆಹಲಿ: ಲಸಿಕೆ ಒದಗಿಸುವ ಮೂಲಕ ವಿಶ್ವದ ಬೆಂಬಲಕ್ಕೆ ನಿಂತಿರುವ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಘೆಬ್ರೆಯೆಸಸ್ ಧನ್ಯವಾದ ಅರ್ಪಿಸಿದ್ದಾರೆ.
ಕೋವಾಕ್ಸ್ಗೆ ಭಾರತದ ಬದ್ಧತೆ ಮತ್ತು ಕೋವಿಡ್-19 ಲಸಿಕೆ ಡೋಸ್ ಅನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳುವ ಭಾರತದ ಕಾರ್ಯವನ್ನು ಅವರು ಕೊಂಡಾಡಿದ್ದಾರೆ, ವಿಶ್ವದಾದ್ಯಂತ 60 ಕ್ಕೂ ಹೆಚ್ಚು ದೇಶಗಳಿಗೆ ಭಾರತ ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತದಿಂದ ಲಸಿಕೆ ಸ್ವೀಕರಿಸುವ ಕಾರಣದಿಂದಾಗಿ ಅನೇಕ ದೇಶಗಳಿಗೆ ತಮ್ಮ ಆರೋಗ್ಯ ಕಾರ್ಯಕರ್ತರು ಮತ್ತು ಇತರ ಆದ್ಯತೆಯ ಗುಂಪುಗಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಹಾಯ ಮಾಡಿದೆ ಎಂದು ಡಾ. ಟೆಡ್ರೊಸ್ ಒತ್ತಿ ಹೇಳಿದ್ದಾರೆ. ಅವರು ಇತರ ದೇಶಗಳು ಕೂಡ ಭಾರತದ ಮಾದರಿಯನ್ನು ಅನುಸರಿಸಬೇಕೆಂದು ಕರೆ ನೀಡಿದ್ದಾರೆ.
ಗುರುವಾರ ಟ್ವಿಟ್ ಮಾಡಿರುವ ಟೆಡ್ರೊಸ್ ಘೆಬ್ರೆಯೆಸಸ್, ” ವ್ಯಾಕ್ಸಿನ್ ಎಕ್ವಿಟಿಯನ್ನು ಬೆಂಬಲಿಸಿದ್ದಕ್ಕಾಗಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಕೋವ್ಯಾಕ್ಸ್ಗೆ ನಿಮ್ಮ ಬದ್ಧತೆ ಮತ್ತು ಕೋವಿಡ್-19 ಲಸಿಕೆ ಡೋಸ್ ಅನ್ನು ಹಂಚಿಕೊಳ್ಳುತ್ತಿರುವುದರಿಂದ 60+ ದೇಶಗಳು ತಮ್ಮ ಆರೋಗ್ಯ ಕಾರ್ಯಕರ್ತರು ಮತ್ತು ಇತರ ಆದ್ಯತೆಯ ಗುಂಪುಗಳಿಗೆ ಲಸಿಕೆ ನೀಡಲು ಪ್ರಾರಂಭಿಸಲು ಸಹಾಯ ಆಗಿದೆ. ನಿಮ್ಮ ಉದಾಹರಣೆಯನ್ನು ಇತರ ದೇಶಗಳು ಅನುಸರಿಸುತ್ತವೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
Thanks 🇮🇳 & Prime Minister @narendramodi for supporting #VaccinEquity. Your commitment to #COVAX and sharing #COVID19 vaccine doses is helping 60+ countries start vaccinating their #healthworkers and other priority groups. I hope other countries will follow your example.
— Tedros Adhanom Ghebreyesus (@DrTedros) February 25, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.