ನವದೆಹಲಿ: ದೇಶದ ಕೃಷಿ ಧಾನ್ಯ ಉತ್ಪಾದನೆಯು ದಾಖಲೆಯ 303.34 ದಶಲಕ್ಷ ಟನ್ಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ. 2020- 2021ನೇ ಸಾಲಿನ ಪ್ರಧಾನ ಬೆಳೆಗಳ ಉತ್ಪಾದನೆಯ ಎರಡನೇ ಮುಂಗಡ ಅಂದಾಜುಗಳನ್ನು ಬಿಡುಗಡೆ ಮಾಡಿದ ಸಚಿವಾಲಯ, ಇದು 2019-20ರ ಅವಧಿಯಲ್ಲಿ ಸಾಧಿಸಿದ 297.50 ದಶಲಕ್ಷ ಟನ್ಗಳಷ್ಟು ಆಹಾರ ಧಾನ್ಯದ ಉತ್ಪಾದನೆಗಿಂತ 5.84 ದಶಲಕ್ಷ ಟನ್ಗಳಷ್ಟು ಹೆಚ್ಚಾಗಿದೆ ಎಂದಿದೆ.
ರೈತರ ದಣಿವರಿಯದ ಕಠಿಣ ಪರಿಶ್ರಮ, ಕೃಷಿ ವಿಜ್ಞಾನಿಗಳ ಸಂಶೋಧನೆ ಮತ್ತು ಕೇಂದ್ರ ಸರ್ಕಾರದ ರೈತ ಸ್ನೇಹಿ ನೀತಿಗಳನ್ನು ಇದು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಸರ್ವತೋಮುಖ ಕೃಷಿ ಸುಧಾರಣೆಗಳು ಸಹ ದೀರ್ಘಾವಧಿಯಲ್ಲಿ ದೇಶಕ್ಕೆ ಪ್ರಯೋಜನವನ್ನು ನೀಡುತ್ತವೆ ಎಂದು ಸಚಿವಾಲಯ ತಿಳಿಸಿದೆ.
ಎರಡನೇ ಮುಂಗಡ ಅಂದಾಜಿನ ಪ್ರಕಾರ, 2020-21ರ ಅವಧಿಯಲ್ಲಿ ಒಟ್ಟು ಅಕ್ಕಿ ಉತ್ಪಾದನೆಯು ದಾಖಲೆಯ 120.32 ಮಿಲಿಯನ್ ಟನ್ ಎಂದು ಅಂದಾಜಿಸಲಾಗಿದೆ, ಇದು ಕಳೆದ ಐದು ವರ್ಷಗಳ ಸರಾಸರಿ ಉತ್ಪಾದನೆ 112.44 ಮಿಲಿಯನ್ ಟನ್ಗಳಿಗಿಂತ 7.88 ಮಿಲಿಯನ್ ಟನ್ ಹೆಚ್ಚಾಗಿದೆ. 2020-21ರ ಅವಧಿಯಲ್ಲಿ ಗೋಧಿ ಉತ್ಪಾದನೆಯು ದಾಖಲೆಯ 109.24 ಮಿಲಿಯನ್ ಟನ್ ಎಂದು ಅಂದಾಜಿಸಲಾಗಿದ್ದು, ಇದು ಕಳೆದ ವರ್ಷದ ಸರಾಸರಿ ಗೋಧಿ ಉತ್ಪಾದನೆ 100.42 ಮಿಲಿಯನ್ ಟನ್ ಗಿಂತ 8.81 ಮಿಲಿಯನ್ ಟನ್ ಹೆಚ್ಚಾಗಿದೆ. 2020-21ರ ಅವಧಿಯಲ್ಲಿ ಒಟ್ಟು ದ್ವಿದಳ ಧಾನ್ಯಗಳ ಉತ್ಪಾದನೆಯು 24.42 ಮಿಲಿಯನ್ ಟನ್ ಎಂದು ಅಂದಾಜಿಸಲಾಗಿದೆ, ಇದು ಕಳೆದ ಐದು ವರ್ಷಗಳ ಸರಾಸರಿ ಉತ್ಪಾದನೆ 21.99 ಮಿಲಿಯನ್ ಟನ್ಗಳಿಗಿಂತ 2.43 ಮಿಲಿಯನ್ ಟನ್ ಹೆಚ್ಚಾಗಿದೆ.
ಈ ವರ್ಷದ ನೈರುತ್ಯ ಮಾನ್ಸೂನ್ ಋತುವಿನಲ್ಲಿ ಒಟ್ಟು ಮಳೆ ದೀರ್ಘ ಅವಧಿಯ ಸರಾಸರಿಗಿಂತ 9 ಶೇಕಡಾ ಹೆಚ್ಚಾಗಿದೆ ಎಂದು ಸಚಿವಾಲಯ ಹೇಳಿದೆ. ಅಂತೆಯೇ, ಹೆಚ್ಚಿನ ಪ್ರಮುಖ ಬೆಳೆಗಳನ್ನು ಉತ್ಪಾದಿಸುವ ರಾಜ್ಯಗಳು ಸಾಮಾನ್ಯ ಮಳೆಗೆ ಸಾಕ್ಷಿಯಾಗಿವೆ. 2020-21ರ ಕೃಷಿ ವರ್ಷದಲ್ಲಿ ಹೆಚ್ಚಿನ ಬೆಳೆಗಳ ಉತ್ಪಾದನೆಯು ಅವುಗಳ ಸಾಮಾನ್ಯ ಉತ್ಪಾದನೆಗಿಂತ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.