ನವದೆಹಲಿ: ಆಟಿಕೆಗಳ ದೇಶೀಯ ಉತ್ಪಾದನೆಗೆ ಮೇಕ್ ಇನ್ ಇಂಡಿಯಾದಡಿ ಉತ್ತೇಜನವನ್ನು ನೀಡುವ ಸಲುವಾಗಿ, 2,300 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಎಂಟು ಆಟಿಕೆ ಉತ್ಪಾದನಾ ಕ್ಲಸ್ಟರ್ಗಳನ್ನು ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಮೂಲಗಳು ವರದಿ ಮಾಡಿವೆ.
ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆಗಾಗಿ ನಿಧಿಯ ಯೋಜನೆ (ಸ್ಕೀಂ ಆಫ್ ಫಂಡ್ ಫಾರ್ ರಿ ಜನರೇಷನ್ ಆಫ್ ಟ್ರೆಡಿಷನಲ್ ಇಂಡಸ್ಟ್ರೀಸ್-Sfurti) ಯಂತಹ ಅಸ್ತಿತ್ವದಲ್ಲಿರುವ ಯೋಜನೆಗಳ ಅಡಿಯಲ್ಲಿ ಎಂಟು ಆಟಿಕೆ ಕ್ಲಸ್ಟರ್ಗಳನ್ನು ಸ್ಥಾಪಿಸಲು ಸರ್ಕಾರ ನೋಡುತ್ತಿದೆ. ಒಮ್ಮೆ ಸ್ಥಾಪಿಸಿದ ನಂತರ, ಮರ, ತಾಳೆ ಎಲೆಗಳು, ಬಿದಿರು ಮತ್ತು ಬಟ್ಟೆಯಿಂದ ಮಾಡಿದ ಆಟಿಕೆಗಳ ತಯಾರಿಕೆ ಹೆಚ್ಚಾಗಲಿದೆ.
ಎಂಟು ಕ್ಲಸ್ಟರ್ಗಳಲ್ಲಿ ಮೂರು ಮಧ್ಯಪ್ರದೇಶದಲ್ಲಿ, ಎರಡು ರಾಜಸ್ಥಾನದಲ್ಲಿ ಮತ್ತು ಕರ್ನಾಟಕ, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ ಒಂದು ಕ್ಲಸ್ಟರ್ ತಲೆ ಎತ್ತಲಿದೆ.
ಈ ನಡುವೆ ಇವುಗಳ ಜೊತೆಗೆ, ಸ್ಫೂರ್ತಿ ಯೋಜನೆಯಡಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಈಗಾಗಲೇ ಎರಡು ಆಟಿಕೆ ಕ್ಲಸ್ಟರ್ಗಳು ಜಾರಿಯಲ್ಲಿವೆ ಎಂಬುದನ್ನು ಗಮನಿಸಬೇಕು. ಒಟ್ಟಾರೆಯಾಗಿ, ದೇಶಾದ್ಯಂತ ಒಟ್ಟು 35 ಆಟಿಕೆ ಸಮೂಹಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ.
ಕೌಶಲ್ಯ ಅಭಿವೃದ್ಧಿ, ಸಾಮರ್ಥ್ಯ ವೃದ್ಧಿ, ಸಾಮಾನ್ಯ ಸೌಲಭ್ಯ ಕೇಂದ್ರಗಳಂತಹ ಸೌಲಭ್ಯಗಳ ರಚನೆ, ಪುನರ್ವಸತಿ ಸೌಲಭ್ಯಗಳು ಮತ್ತು ಸ್ಥಳೀಯ ಕೈಗಾರಿಕೆಗಳಿಗೆ ಮಾರುಕಟ್ಟೆ ಮತ್ತು ಇ-ಕಾಮರ್ಸ್ ನೆರವು ಮುಂತಾದ ಪ್ರೋತ್ಸಾಹಗಳನ್ನು ಸ್ಫೂರ್ತಿ ಯೋಜನೆ ನೀಡುತ್ತದೆ.
ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ನಡೆಯಲಿರುವ ಇಂಡಿಯಾ ಟಾಯ್ ಫೇರ್ -2021 ಗಿಂತ ಮುಂಚಿತವಾಗಿ ಎಂಟು ಹೊಸ ಆಟಿಕೆ ಉತ್ಪಾದನಾ ಸಮೂಹಗಳಿಗೆ ಸರ್ಕಾರದ ಅನುಮೋದನೆ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.