ನವದೆಹಲಿ: ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಹಿಂದೆ ಆಗುವುದೇ ಇಲ್ಲ ಎಂದು ಭಾವಿಸಿದ್ದೆಲ್ಲ ಈಗ ಆಗುತ್ತಿದೆ. ನಾಗಾಲ್ಯಾಂಡ್ ರಚನೆಯಾದ 58 ವರ್ಷಗಳಲ್ಲೇ ಮೊದಲ ಬಾರಿಗೆ ಅಲ್ಲಿನ ವಿಧಾನಸಭಾ ಅಧಿವೇಶನದಲ್ಲಿ ರಾಷ್ಟ್ರಗೀತೆ ಮೊಳಗಿದೆ. ರಾಜ್ಯದ ಸಂಸ್ಥಾಪನ ದಿನದಂದು ರಾಷ್ಟ್ರಗೀತೆ ಹಾಡಲಾಗಿದೆ.
ಫೆಬ್ರವರಿ 12, 2021 ರಂದು ನಾಗಾಲ್ಯಾಂಡ್ ಗವರ್ನರ್ ಆರ್.ಎನ್. ರವಿ 13 ನೇ ನಾಗಾಲ್ಯಾಂಡ್ ಶಾಸಕಾಂಗದ 7 ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. 1963 ರ ಡಿಸೆಂಬರ್ 1 ರಂದು ನಾಗಾಲ್ಯಾಂಡ್ ರಾಜ್ಯ ಸ್ಥಾನಮಾನ ಪಡೆದ ನಂತರ ಮೊದಲ ಬಾರಿಗೆ ಅಲ್ಲಿ ಸದನದಲ್ಲಿ ರಾಷ್ಟ್ರಗೀತೆ ನುಡಿಸಲಾಯಿತು.
ಈ ಅಪರೂಪದ ಸನ್ನಿವೇಶವನ್ನು ಭದ್ರತಾ ವಿಶ್ಲೇಷಕ ನಿತಿನ್ ಎ ಗೋಖಲೆ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ವೀಡಿಯೊವನ್ನು ವೀಕ್ಷಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ. 1963 ರ ಡಿಸೆಂಬರ್ 1 ರಿಂದ ನಾಗಾಲ್ಯಾಂಡ್ ಅಸೆಂಬ್ಲಿಯಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ವನ್ನು ಮೊದಲ ಬಾರಿಗೆ ನುಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಫೆಬ್ರವರಿ 12 ರಿಂದ ಆರಂಭವಾದ 13 ನೇ ನಾಗಾಲ್ಯಾಂಡ್ ವಿಧಾನಸಭೆಯ (ಎನ್ಎಲ್ಎ) ಏಳನೇ ಅಧಿವೇಶನವು ಹೊಸ ಸಂಪ್ರದಾಯಗಳೊಂದಿಗೆ ಶುಕ್ರವಾರ ನಿಗದಿಗೂ ಮೊದಲು ಕೊನೆಗೊಂಡಿತು.
Pl see the video below. At first glance, perfectly normal scene, right? But you will be amazed, like I was, to know that this was for the first time that the National Anthem was played in the Nagaland Assembly. Just for the record, Nagaland became a State on 1 December 1963 pic.twitter.com/70s6Q20d1N
— Nitin A. Gokhale (@nitingokhale) February 19, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.