ಆಗ್ರಾ: ಭಾರತೀಯ ವಾಯುಪಡೆಯ ಆಗ್ರಾದ ವಾಯುನೆಲೆಗೆ ಕಳೆದ ಫೆ. 14 ರ ಭಾನುವಾರದಂದು 4 ಹೊಸ ಅತಿಥಿಗಳು ಸೇರ್ಪಡೆಯಾಗಿದ್ದಾರೆ.
ದೇಶೀಯ ತಳಿ, ಕರ್ನಾಟಕದ ಬುದ್ಧಿವಂತಿಕೆಗೆ ಹೆಸರುವಾಸಿಯಾದ ಮುಧೋಳ ತಳಿಯ 4 ಶ್ವಾನಗಳನ್ನು ವಾಯುಪಡೆಗೆ ಸೇರ್ಪಡೆ ಮಾಡಿದೆ.
ವಾಯುಯಾನದ ಸಂದರ್ಭದಲ್ಲಿ ಹಕ್ಕಿಗಳು ವಿರುದ್ಧ ದಿಕ್ಕಿನಲ್ಲಿ ಸಿಗುವ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಶ್ವಾನಗಳು ವಾಯುಪಡೆಗೆ ಸಹಕರಿಸಲಿವೆ. ಜೊತೆಗೆ ರನ್ವೇ ನಲ್ಲಿ ಓಡಾಟ ನಡೆಸುವ ಪ್ರಾಣಿ, ಪಕ್ಷಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿಯೂ ಈ ಮುಧೋಳ ಶ್ವಾನಗಳು ವಾಯುಪಡೆಗೆ ಸಹಕಾರಿಯಾಗಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.