ನವದೆಹಲಿ: ಪ್ರಸ್ತುತ ದೇಶ ವಿಮಾನ ಪ್ರಯಾಣವು ಕೋವಿಡ್ ಪೂರ್ವದಲ್ಲಿದ್ದ ಸಂಖ್ಯೆಯನ್ನೇ ತಲುಪುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಇಂದು ಹೇಳಿದ್ದಾರೆ.
ಟ್ವಿಟ್ ಮಾಡಿರುವ ಅವರು, “ನಿನ್ನೆ 2,349 ವಿಮಾನಗಳಲ್ಲಿ 2 ಲಕ್ಷ 97 ಸಾವಿರ 102 ಪ್ರಯಾಣಿಕರು ಪ್ರಯಾಣಿಸಿದ್ದಾರೆ” ಎಂದು ಹೇಳಿದ್ದಾರೆ.
ಮೇ 25 ರಂದು ದೇಶೀಯ ವಿಮಾನಗಳನ್ನು ಪುನರಾರಂಭಿಸಿದ ನಂತರ ಇದು ಅತಿ ಹೆಚ್ಚು ಪ್ರಯಾಣಿಕರ ಸಂಖ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ.
ಸುರಕ್ಷತೆ, ದಕ್ಷತೆ ಮತ್ತು ಸಮಯದ ಉಳಿತಾಯದ ಕಾರಣದಿಂದಾಗಿ ವಿಮಾನ ಪ್ರಯಾಣವು ಆದ್ಯತೆಯ ಪ್ರಯಾಣದ ವಿಧಾನವಾಗಿ ಹೊರಹೊಮ್ಮುತ್ತಿರುವುದರಿಂದ, ನಾವು ಬಹುತೇಕ ಕೋವಿಡ್ ಪೂರ್ವ ಸಂಖ್ಯೆಯನ್ನು ಸ್ಪರ್ಶಿಸುತ್ತಿದ್ದೇವೆ ಎಂದು ಪುರಿ ಹೇಳಿದ್ದಾರೆ.
2,97,102 passengers on 2,349 flights on 12 Feb 2021 is the highest since resumption of domestic flights on 25 May.
With air travel emerging as a preferred mode of travel due to safety, efficiency & time saving, we are almost touching Pre-COVID numbers.@DGCAIndia @AAI_Official pic.twitter.com/ljaif9Firb
— Hardeep Singh Puri (@HardeepSPuri) February 13, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.