ನವದೆಹಲಿ: ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) 2010 ರ ವಿವಿಧ ನಿಬಂಧನೆಗಳ ಉಲ್ಲಂಘನೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ 2011 ರಿಂದ ಇಲ್ಲಿಯವರೆಗೆ 20,600 ಕ್ಕೂ ಹೆಚ್ಚು ಎನ್ಜಿಒಗಳು ಮತ್ತು ಸಂಘಗಳ ವಿದೇಶಿ ಧನಸಹಾಯ ಪರವಾನಗಿಗಳನ್ನು ರದ್ದುಪಡಿಸಲಾಗಿದೆ ಎಂದು ಗೃಹ ಸಚಿವಾಲಯ ಲೋಕಸಭೆಗೆ ತಿಳಿಸಿದೆ.
ವಾರ್ಷಿಕ ರಿಟರ್ನ್ಸ್ ಸಲ್ಲಿಸುವಲ್ಲಿ ವಿಫಲವಾದ ಕಾರಣ ಹೆಚ್ಚಿನ ರದ್ದತಿಗಳು ನಡೆದಿವೆ ಎಂದು ಮಾಹಿತಿ ನೀಡಿದೆ.
2018 ರಿಂದ 2020 ರವರೆಗಿನ ಕಳೆದ ಮೂರು ವರ್ಷಗಳಲ್ಲಿ 1,810 ಎನ್ಜಿಒಗಳ ಎಫ್ಸಿಆರ್ಎ ನೋಂದಣಿ ರದ್ದುಗೊಂಡಿದೆ ಎಂದು ಪ್ರಶ್ನೆಗೆ ಉತ್ತರಿಸಿದ ಗೃಹ ಖಾತೆ ಸಚಿವ ನಿತ್ಯಾನಂದ್ ರಾಯ್ ಹೇಳಿದ್ದಾರೆ. ಅಲ್ಲದೆ, 2020 ರಲ್ಲಿ ಕೇವಲ 463 ಸೇರಿದಂತೆ 2016 ರಿಂದ 8,353 ಎನ್ಜಿಒಗಳ ಎಫ್ಸಿಆರ್ಎ ಪ್ರಮಾಣಪತ್ರಗಳನ್ನು ನವೀಕರಿಸಲಾಗಿಲ್ಲ.
ಎಫ್ಸಿಆರ್ಎ ಸೆಕ್ಷನ್ 13 ರ ಅಡಿಯಲ್ಲಿ ಕಳೆದ ವರ್ಷ 25 ಎನ್ಜಿಒಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದ್ದು, 2019 ರಲ್ಲಿ ಈ ಸಂಖ್ಯೆ ಐದು ಆಗಿತ್ತು, 2018 ರಲ್ಲಿ 233 ಆಗಿತ್ತು ಎಂದು ಗೃಹ ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.