ನವದೆಹಲಿ: ಕೆಂಪು ಕೋಟೆ ಹಿಂಸಾಚಾರ ಪ್ರಕರಣದ ಎಂಟು ಪ್ರಮುಖ ಶಂಕಿತರ ಪೈಕಿ ಒಬ್ಬನಾದ ಇಕ್ಬಾಲ್ ಸಿಂಗ್ ಅನ್ನು ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆತನ ಮಾಹಿತಿ ನೀಡುವವರಿಗೆ ಪೊಲೀಸರು ಆರು ಲಕ್ಷ ರೂ.ಗಳ ಬಹುಮಾನ ಘೋಷಿಸಿದ್ದರು.
ಮಂಗಳವಾರ ರಾತ್ರಿ ಅತನನ್ನು ಪಂಜಾಬ್ನ ಹೋಶಿಯಾರ್ಪುರದಿಂದ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ವಿಶೇಷ ಘಟಕ) ಸಂಜೀವ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಗಣರಾಜ್ಯೋತ್ಸವದ ಹಿಂಸಾಚಾರದ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಫೇಸ್ಬುಕ್ ಲೈವ್ ಮಾಡಿದ್ದ ಸಿಂಗ್ ಅನ್ನು ಪೊಲೀಸರು ಗುರುತಿಸಿದ್ದರು. ಇಕ್ಬಾಲ್ ಸಿಂಗ್ ಪ್ರತಿಭಟನಾಕಾರರನ್ನು ಪ್ರಚೋದಿಸಿದ ಆರೋಪ ಹೊತ್ತಿದ್ದಾನೆ ಮತ್ತು ಕೆಂಪು ಕೋಟೆಯಲ್ಲಿ ಅವನ ಉಪಸ್ಥಿತಿಯನ್ನು ಅವರ ಫೇಸ್ಬುಕ್ ಲೈವ್ ಮತ್ತು ಇತರ ವಿಡಿಯೋ ತುಣುಕಿನೊಂದಿಗೆ ದೃಢಪಡಿಸಲಾಗಿದೆ.
ಬುಧವಾರ ದೆಹಲಿ ನ್ಯಾಯಾಲಯವು ಇಕ್ಬಾಲ್ ಸಿಂಗ್ ಅನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಈ ಪ್ರಕರಣದ ಮತ್ತೊಬ್ಬ ಶಂಕಿತ, ನಟ ದೀಪ್ ಸಿಧು ಅನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ದೀಪ್ ಸಿಧು ಮತ್ತು ಇತರ ಮೂವರು ಆರೋಪಿಗಳ ಮಾಹಿತಿ ನಿಡುವವರಿಗೆ ಪೊಲೀಸರು ಒಂದು ಲಕ್ಷ ರೂ.ಬಹುಮಾನ ಘೋಷಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.