ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಕಳೆದ 10 ತಿಂಗಳಿನಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿ – ಮುಂಬೈ ನಡುವಿನ ವಿಮಾನ ಸೇವೆಯನ್ನು ಫೆ. 16 ರಿಂದ ತೊಡಗಿದಂತೆ ಪುನರಾರಂಭ ಮಾಡಲು ಏರ್ ಇಂಡಿಯಾ ನಿರ್ಧರಿಸಿದೆ.
ವಾರದಲ್ಲಿ ಮೂರು ದಿನ ಈ ವಿಮಾನಗಳು ಪ್ರಯಾಣಿಕರಿಗೆ ಸೇವೆ ಒದಗಿಸಲಿವೆ. ಮಂಗಳವಾರ, ಶುಕ್ರವಾರ ಮತ್ತು ಶನಿವಾರಗಳಂದು ಏರ್ ಇಂಡಿಯ ಹುಬ್ಬಳ್ಳಿ ಮತ್ತು ಮುಂಬೈ ನಡುವೆ ವಿಮಾನ ಸಂಚಾರದ ವ್ಯವಸ್ಥೆಯನ್ನು ಒದಗಿಸಲಿದೆ. ಕೊರೋನಾ ನಿಯಂತ್ರಣ ನಿಯಮಗಳನ್ನು ಅನುಸರಿಸಿ ಈ ಸೇವೆಗಳನ್ನು ಪುನರಾರಂಭ ಮಾಡಲಾಗುವುದಾಗಿ ಏರ್ ಇಂಡಿಯಾ ತಿಳಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ಈ ಎರಡು ನಗರಗಳ ನಡುವಿನ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಸೇವೆ 2020 ರ ಜ. 20 ರಂದು ಆರಂಭವಾಗಿತ್ತು. ಆರಂಭವಾದ ಎರಡೇ ತಿಂಗಳಿನಲ್ಲಿ ಕೊರೋನಾ ಕಾರಣದಿಂದ ಸ್ಥಗಿತವಾಗಿತ್ತು. ಇದೀಗ 10 ತಿಂಗಳ ಬಳಿಕ ಮತ್ತೆ ಈ ವಿಮಾನ ಸೇವೆ ಆರಂಭವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.