ನವದೆಹಲಿ: ಸಂಗೀತ ಲೋಕದ ದೊರೆ ಪಂಡಿತ್ ಭೀಮ್ಸೇನ್ ಜೋಶಿ ಅವರ ವರ್ಷಪೂರ್ತಿಯ ಜನ್ಮ ಶತಮಾನೋತ್ಸವ ಇಂದು ಪ್ರಾರಂಭವಾಗಲಿದೆ. ಮಹಾನ್ ಸಂಗೀತ ಮಾಂತ್ರಿಕನ ಸಂಗೀತ ಪರಂಪರೆಯ ಸ್ಮರಣಾರ್ಥ ಮುಂಬೈನಲ್ಲಿ ಎರಡು ದಿನಗಳ ಕಾರ್ಯಕ್ರಮವನ್ನು ರಿತ್ವಿಕ್ ಫೌಂಡೇಶನ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ ಆಯೋಜಿಸಲಾಗಿದೆ.
ಜಯತೀರ್ಥ್ ಮೆವುಂಡಿ ಅವರ ಪಂಡಿತ್ಜಿ ಸಂಯೋಜನೆಗಳ ಚಿತ್ರಣದೊಂದಿಗೆ ʼಸ್ವರಭಾಸ್ಕರ್ 100ʼ ಕಾರ್ಯಕ್ರಮ ಇಂದು ಮುಕ್ತಾಯಗೊಳ್ಳಲಿದೆ. ಆರ್ಯ ಸಂಗೀತ ಪ್ರಸರಕ್ ಮಂಡಲವು ಶನಿವಾರ ಮತ್ತು ಭಾನುವಾರ ಮಹಾರಾಷ್ಟ್ರದ ಪುಣೆಯ ಗಣೇಶ ಕಲಾ ಕ್ರೀಡಾ ಮಂಚ್ನಲ್ಲಿ ‘ಅಭಿವಂದನ್’ ಎಂಬ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.
ಸ್ವರ ಸಾಮ್ರಾಟನ ಜೀವನ ಮತ್ತು ಸಂಗೀತವನ್ನು ಆಚರಿಸಲು, ಫಿಲ್ಮ್ಸ್ ಡಿವಿಜನ್ ಜೀವನಚರಿತ್ರೆಯನ್ನು ಇಂದು ತನ್ನ ವೆಬ್ಸೈಟ್ ಮತ್ತು ಯೂಟ್ಯೂಬ್ ಚಾನೆಲ್ನಲ್ಲಿ ಪ್ರದರ್ಶಿಸಲಿದೆ. ಖ್ಯಾತ ಗೀತರಚನೆಕಾರ ಮತ್ತು ಚಲನಚಿತ್ರ ನಿರ್ಮಾಪಕ ಗುಲ್ಜಾರ್ ನಿರ್ದೇಶಿಸಿದ, 73 ನಿಮಿಷಗಳ ಸಾಕ್ಷ್ಯಚಿತ್ರ “ಪಂಡಿತ್ ಭೀಮ್ಸೇನ್ ಜೋಶಿʼ ಪ್ರಸಾರವಾಗಲಿದೆ. ಕಿರಾನಾ ಘರಾನಾಗೆ ಸೇರಿದ ಗಾಯಕನ ಸಂಗೀತ ಪ್ರಯಾಣದ ಒಂದು ಮೆಲುಕು ನೋಟವನ್ನು ಇದು ನೋಡಲಿದೆ.
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ದಿಗ್ಗಜನಾಗಿ, ಪಂಡಿತ್ ಭೀಮಸೇನ್ ಜೋಶಿ ಪ್ರೇಕ್ಷಕರನ್ನು ಮೋಡಿ ಮಾಡಿದರು. ಅವರ ಭಾವಪೂರ್ಣ ಖಯಾಲ್ ನಿರೂಪಣೆಗಳು, ಭಜನೆಗಳು ಮತ್ತು ಅಭಾಂಗ್ಗಳು ಕೇಳುಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಸಾಕ್ಷ್ಯಚಿತ್ರವು ದಿನವಿಡೀ ವೆಬ್ಸೈಟ್, https://filmsdivision.org/ ವಾರದ ಡಾಕ್ಯುಮೆಂಟರಿ ಮತ್ತು https://www.youtube.com/user/FilmsDivision ನಲ್ಲಿ ಲಭ್ಯವಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.