ಬೆಂಗಳೂರು: ವಿಶ್ವ ದಾಖಲೆಗಾಗಿ ನವದೆಹಲಿಯಿಂದ ಓಟ ಆರಂಭಿಸಿ ಬೆಂಗಳೂರು ತಲುಪಿರುವ ಸುಫಿಯಾ ಅವರನ್ನು ಯುವ ಸಬಲೀಕರಣ, ಕ್ರೀಡೆ ಹಾಗೂ ಯೋಜನಾ ಸಚಿವ ನಾರಾಯಣ ಗೌಡ ಕೆ ಸಿ ಅವರು ವಿಧಾನಸೌಧದ ಆವರಣದಲ್ಲಿ ಸನ್ಮಾನಿಸಿದರು.
ಸುಫಿಯಾ ಅವರು 2020 ರ ಡಿಸೆಂಬರ್ 16 ರಂದು ರಾಷ್ಟ್ರ ರಾಜಧಾನಿ ನವದೆಹಲಿಯ ಇಂಡಿಯಾ ಗೇಟ್ ನಿಂದ ಈ ಓಟವನ್ನು ಆರಂಭ ಮಾಡಿದ್ದು, ಗಿನ್ನಿಸ್ ಪುಸ್ತಕದಲ್ಲಿ ಹೊಸ ದಾಖಲೆ ಬರೆಯುವ ಗುರಿಯನ್ನು ಹೊಂದಿದ್ದಾರೆ. 87 ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಈ ಓಟವನ್ನು ಸಂಪೂರ್ಣಗೊಳಿಸಿ, ಈಗಾಗಲೇ ಗಿನ್ನಿಸ್ ಪುಸ್ತಕದಲ್ಲಿರುವ 135 ದಿನಗಳ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಈ ಸಾಹಸಕ್ಕೆ ಕೈ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಇನ್ನೂ ಹಲವು ಗಣ್ಯರು ಉಪಸ್ಥಿತರಿದ್ದರು.
ವಿಶ್ವ ದಾಖಲೆಗಾಗಿ ದೆಹಲಿಯಿಂದ ಓಟ ಆರಂಭಿಸಿ ಬೆಂಗಳೂರು ತಲುಪಿರುವ ಕು.ಸುಫಿಯಾ ಅವರನ್ನು ಮಾನ್ಯ ಯುವಸಬಲೀಕರಣ, ಕ್ರೀಡೆ ಹಾಗೂ ಯೋಜನಾ ಸಚಿವ ಶ್ರೀ @narayanagowdakc ಅವರು ಇಂದು ವಿಧಾನಸೌಧದ ಆವರಣದಲ್ಲಿ ಸನ್ಮಾನಿಸಿದರು. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶ್ರೀಮತಿ @shalinirajnish ಉಪಸ್ಥಿತರಿದ್ದರು.@CMofKarnataka @BSYBJP pic.twitter.com/LNrGhlqEvI
— DIPR Karnataka (@KarnatakaVarthe) February 2, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.