ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬೆಂಗಳೂರಿಗೆ ಇಂದು ಆಗಮಿಸಲಿದ್ದಾರೆ.
ಸಚಿವರು ನೆಕ್ಕುಂದಿ ರಸ್ತೆಯಲ್ಲಿರುವ, ಎಲ್ಸಿಎ ತೇಜಸ್ ಡಿವಿಷನ್ ಪ್ಲಾಂಟ್-2 ಗೆ ಭೇಟಿ ನೀಡಲಿದ್ದಾರೆ. ಸೆಕೆಂಡ್ ಎಲ್ಸಿಎ ಪ್ರೊಡಕ್ಷನ್ ಲೈನ್ ಅನ್ನು ಉದ್ಘಾಟಿಸಲಿದ್ದಾರೆ. ಲಘು ಮತ್ತು ಹಗುರ ಯುದ್ಧ ವಿಮಾನಗಳನ್ನು ಈ ಪ್ಲಾಂಟ್ ನಲ್ಲಿ ತಯಾರಿಸಲಾಗುತ್ತದೆ.
ಕೊರೋನಾ ನಡುವೆಯೇ ಫೆ. 3 ರಿಂದ ತೊಡಗಿದಂತೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ಏರ್ ಶೋ- 2021 ನಡೆಯಲಿದ್ದು, ಲೋಹದ ಹಕ್ಕಿಗಳ ತಾಲೀಮು ಈಗಾಗಲೇ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿಯೂ ರಾಜ್ನಾಥ್ ಸಿಂಗ್ ಅವರ ಬೆಂಗಳೂರು ಭೇಟಿ ಮಹತ್ವ ಪಡೆದಿದೆ.
ಏರ್ ಶೋ ನಾಳೆಯಿಂದಲೇ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವಿಮಾನಗಳ ತಾಲೀಮು ಪೂರ್ಣ ಪ್ರಮಾಣದಲ್ಲಿ ಇಂದು ನಡೆಯಲಿವೆ. ದೇಶೀಯ ಮಾತ್ರವಲ್ಲದೆ ವಿದೇಶೀ ವಿಮಾನಗಳಿಂದಲೂ ಪ್ರದರ್ಶನ ನಡೆಯಲಿದೆ. ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಹೆಚ್ಚು ಜನರಿಗೆ ಈ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿಲ್ಲ. ಆದರೆ ಸಾರ್ವಜನಿಕರಿಗೆ ನಿರಾಶೆಯಾಗದಂತೆ ಈ ಪ್ರದರ್ಶನವನ್ನು ಸೋಷಿಯಲ್ ಮೀಡಿಯಾ, ವೆಬ್ಸೈಟ್ಗಳ ಮೂಲಕ ಪ್ರಸಾರ ಮಾಡಲಾಗುತ್ತದೆ ಎಂದು ಆಯೋಜಕರು ಈ ಹಿಂದೆಯೇ ಮಾಹಿತಿ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.