ನವದೆಹಲಿ: ಈ ವರ್ಷದ ಜನವರಿ 20 ರಿಂದ ಭಾರತವು 55 ಲಕ್ಷ ಡೋಸ್ ಕೋವಿಡ್- 19 ಲಸಿಕೆಗಳನ್ನು ತನ್ನ ನೆರೆಹೊರೆಯವರಿಗೆ ಮತ್ತು ದೂರದ ನೆರೆಹೊರೆಯವರಿಗೆ ಉಡುಗೊರೆಯಾಗಿ ನೀಡಿದೆ ಎಂದು ಸರ್ಕಾರ ಹೇಳಿದೆ.
ಇದರಲ್ಲಿ ಭೂತಾನ್ಗೆ 1.5 ಲಕ್ಷ, ಮಾಲ್ಡೀವ್ಸ್ಗೆ 1 ಲಕ್ಷ, ನೇಪಾಳಕ್ಕೆ 10 ಲಕ್ಷ, ಬಾಂಗ್ಲಾದೇಶಕ್ಕೆ 20 ಲಕ್ಷ, ಮ್ಯಾನ್ಮಾರ್ಗೆ 15 ಲಕ್ಷ, ಮಾರಿಷಸ್ಗೆ 1 ಲಕ್ಷ, ಸೀಶೆಲ್ಗೆ 50 ಸಾವಿರ, ಶ್ರೀಲಂಕಾಕ್ಕೆ 5 ಲಕ್ಷ ಮತ್ತು ಬಹ್ರೇನ್ಗೆ 1 ಲಕ್ಷ ಡೋಸ್ ಸೇರಿವೆ.
ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು, ಆ ದೇಶಗಳ ಕೋರಿಕೆಗಳನ್ನು ಆಧರಿಸಿದೆ ಲಸಿಕೆ ಪೂರೈಕೆ ಮಾಡಲಾಗಿದೆ ಎಂದಿದ್ದಾರೆ.
ಮುಂದಿನ ಕೆಲವು ದಿನಗಳಲ್ಲಿ, ಒಮಾನ್ಗೆ 1 ಲಕ್ಷ ಡೋಸ್, ಕ್ಯಾರಿಕೊಮ್ ದೇಶಗಳಿಗೆ 5 ಲಕ್ಷ, ನಿಕರಾಗುವಾಕ್ಕೆ 2 ಲಕ್ಷ ಮತ್ತು ಪೆಸಿಫಿಕ್ ದ್ವೀಪ ರಾಜ್ಯಗಳಿಗೆ 2 ಲಕ್ಷ ಡೋಸ್ ಉಡುಗೊರೆಯಾಗಿ ನೀಡಲು ಭಾರತ ಯೋಜಿಸಿದೆ. ಭಾರತದಿಂದ ಲಸಿಕೆಗಳನ್ನು ಪಡೆಯಲು ಅನೇಕ ದೇಶಗಳಿಗೆ ಆಸಕ್ತಿ ಇದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.