ನವದೆಹಲಿ: ಈ ಬಾರಿಯ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಸಂಸತ್ತಿನ ಕ್ಯಾಂಟಿನ್ ಸದಸ್ಯರಿಗೆ ವಿಸ್ತಾರವಾದ ಮೆನುವನ್ನು ಒದಗಿಸಲಿದೆ, ಆದರೆ ಲೋಕಸಭಾ ಸಚಿವಾಲಯವು ಕ್ಯಾಂಟೀನ್ನಲ್ಲಿನ ಆಹಾರದ ಮೇಲಿನ ಸಬ್ಸಿಡಿಗಳನ್ನು ಕಡಿತಗೊಳಿಸಿರುವುದರಿಂದ ಕಡಿಮೆ ಬೆಲೆಯಲ್ಲಿ ಆಹಾರಗಳು ಲಭ್ಯವಾಗುವುದಿಲ್ಲ.
ಮೆನುವಿನಲ್ಲಿ ಅಗ್ಗದ ಬೆಲೆಗೆ ಸಿಗುವ ಆಹಾರವೆಂದರೆ ಚಪಾತಿ. 3 ರೂಪಾಯಿಗೆ ಚಪಾತಿ ಸಿಗುತ್ತದೆ. ಮಾಂಸಾಹಾರಿ ಆಹಾರಕ್ಕೆ ಅತೀ ಹೆಚ್ಚು ಅಂದರೆ 700 ರೂ ಇರಲಿದೆ. ಸಸ್ಯಾಹಾರಿ ಬಫೆಟ್ಗೆ ಹೆಚ್ಚು ಅಂದರೆ 500 ರೂ ಆಗಿರಲಿದೆ.
ಪರಿಷ್ಕೃತ ಬೆಲೆಗಳು ಬಜೆಟ್ ಅಧಿವೇಶನ ಪ್ರಾರಂಭವಾಗುವ ಜನವರಿ 29 ರಿಂದ ಜಾರಿಗೆ ಬರಲಿದ್ದು, ಹೆಚ್ಚಿನ ತಿಂಡಿಗಳನ್ನು ಮಾರುಕಟ್ಟೆ ದರಗಳಿಗೆ ಸಮನಾಗಿ ಮಾರಾಟ ಮಾಡಲಾಗುತ್ತದೆ.
ಹೊಸ ಬೆಲೆಯ ಪಟ್ಟಿಯ ಪ್ರಕಾರ, ಹೈದರಾಬಾದ್ ಮಟನ್ ಬಿರಿಯಾನಿಯಂತಹ ಭಕ್ಷ್ಯಗಳು 65 ರೂಪಾಯಿ ಮತ್ತು ಬೇಯಿಸಿದ ತರಕಾರಿಗಳನ್ನು 12 ರೂ ಮತ್ತು ಸಸ್ಯಾಹಾರಿ ಊಟಕ್ಕೆ 100 ರೂ., ಒಂದು ಪ್ಲೇಟ್ ಮಟನ್ ಬಿರಿಯಾನಿ ಈಗ 150 ರೂ. ಆಗಿರಲಿದೆ. ಅಲ್ಲದೇ, ಮಟನ್ ಕಟ್ಲೆಟ್ ಮತ್ತು ಮಟನ್ ಕರಿ ಬೆಲೆ ಕ್ರಮವಾಗಿ ತಲಾ 150 ಮತ್ತು 125 ರೂ ಆಗಿರಲಿದೆ.
ಸಂಸತ್ತು ಕ್ಯಾಂಟೀನ್ನಲ್ಲಿ ನೀಡಲಾಗುವ ಆಹಾರದ ಸಹಾಯಧನ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಜನವರಿಯಲ್ಲಿ ಘೋಷಿಸಿದ್ದರು.
ಈ ನಿರ್ಧಾರದಿಂದ ಲೋಕಸಭಾ ಸಚಿವಾಲಯವು ವಾರ್ಷಿಕವಾಗಿ 8 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಉಳಿಸಬಹುದು ಎಂದು ಮೂಲಗಳು ತಿಳಿಸಿವೆ.
ಮುಂದಿನ ಸಂಸತ್ತಿನ ಅಧಿವೇಶನದ ಸಿದ್ಧತೆಗಳ ಬಗ್ಗೆ ಜನವರಿ 29 ರಿಂದ ಸುದ್ದಿಗಾರರೊಂದಿಗೆ ಮಾತನಾಡಿದ ಬಿರ್ಲಾ, ಉತ್ತರ ರೈಲ್ವೆಯ ಬದಲಿಗೆ ಸಂಸತ್ತು ಕ್ಯಾಂಟೀನ್ಗಳನ್ನು ಈಗ ಐಟಿಡಿಸಿ ನಡೆಸಲಿದೆ ಎಂದು ಹೇಳಿದರು. ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಎಲ್ಲಾ ಸಂಸತ್ ಸದಸ್ಯರನ್ನು COVID-19 ಪರೀಕ್ಷೆಗೆ ಒಳಪಡಿಸುವಂತೆ ಕೋರಲಾಗುವುದು ಎಂದು ಬಿರ್ಲಾ ಹೇಳಿದರು.
ಕ್ಯಾಂಟೀನ್ ಸಬ್ಸಿಡಿ ಕೊನೆಗೊಳ್ಳಲಿದೆ ಎಂದು ಘೋಷಿಸಿ ಕೇಂದ್ರವು 2016 ರಿಂದ ಹಲವಾರು ಸುತ್ತೋಲೆಗಳನ್ನು ಹೊರಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.