ನವದೆಹಲಿ: ಕಳೆದ ಆಗಸ್ಟ್ನಲ್ಲಿ ಸಾಂಕ್ರಾಮಿಕ ರೋಗದ ನಡುವೆಯೂ ಶಂಕು ಸ್ಥಾಪನೆ ನಡೆಸಲ್ಪಟ್ಟ ದುಬೈನ ಹೊಸ ಹಿಂದೂ ದೇವಾಲಯವು ಮುಂದಿನ ವರ್ಷ ದೀಪಾವಳಿಯಿಂದ ಭಕ್ತರಿಗೆ ಬಾಗಿಲು ತೆರೆಯಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ನಗರದ ಜೆಬೆಲ್ ಅಲಿ ಪ್ರದೇಶದಲ್ಲಿ ಗುರುನಾನಕ್ ಸಿಂಗ್ ದರ್ಬಾರ್ ಪಕ್ಕದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಬುರ್ ದುಬೈನ ಸಿಂಧಿ ಗುರು ದರ್ಬಾರ್ನ ವಿಸ್ತರಣೆಯಾಗಿದೆ ಎಂದು ದುಬೈನ ಸಮುದಾಯ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
ಸಿಂಧಿ ಗುರು ದರ್ಬಾರ್ ದೇವಾಲಯವು ದೇಶದ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ, ಇದು 1950 ರ ದಶಕದಿಂದಲೂ ತೆರೆದಿದೆ.
ಭಾನುವಾರ ಗಲ್ಫ್ ನ್ಯೂಸ್ ಜೊತೆ ಮಾತನಾಡಿದ ದೇವಾಲಯದ ಟ್ರಸ್ಟಿಗಳಲ್ಲಿ ಒಬ್ಬರಾದ ರಾಜು ಶ್ರಾಫ್, “ಈ ದೇವಾಲಯವು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ದುಬೈ ನಾಯಕರ ಮುಕ್ತ ಮನಸ್ಸಿಗೆ ಸಾಕ್ಷಿಯಾಗಿದೆʼ ಎಂದಿದ್ದಾರೆ.
“1950 ರ ದಶಕದಲ್ಲಿ ಒಂದು ಕೋಣೆಯ ದೇವಾಲಯ ಅಗಿದ್ದ ಇದು ಈಗ 70,000 ಚದರ ಅಡಿಗೆ ವಿಸ್ತರಣೆಗೊಂಡಿದೆ. ದುಬೈ ಆಡಳಿತದ ಬೆಂಬಲ ಇರದೇ ಇರುತ್ತಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.