ಪಾಟ್ನಾ: ಬಿಹಾರ ಪೊಲೀಸ್ ಇಲಾಖೆಯು ಇನ್ನು ಮುಂದೆ ತೃತೀಯ ಲಿಂಗಿಗಳನ್ನು ಕೂಡ ನೇಮಕ ಮಾಡಲಿದೆ.
ಉನ್ನತ ಮಟ್ಟದ ಚರ್ಚೆಗಳ ನಂತರ ರಾಜ್ಯ ಗೃಹ ಇಲಾಖೆ ಈ ವಿಷಯವನ್ನು ತಿಳಿಸಿದ್ದು, ಬಿಹಾರ ಪೊಲೀಸರು ಇನ್ನು ಮುಂದೆ ತೃತೀಯ ಲಿಂಗಿ ಸಮುದಾಯದ ಜನರನ್ನು ತಮ್ಮ ಶ್ರೇಣಿಗೆ ಸೇರಿಸಿಕೊಳ್ಳಲಿದ್ದಾರೆ ಎಂದು ಘೋಷಿಸಿದೆ.
ವರದಿಗಳ ಪ್ರಕಾರ, ತೃತೀಯ ಲಿಂಗಿ ಸಮುದಾಯಕ್ಕೆ ಕಾನ್ಸ್ಟೆಬಲ್ ಮತ್ತು ಇನ್ಸ್ಪೆಕ್ಟರ್ ಹುದ್ದೆಗಳಲ್ಲಿ ಮೀಸಲಾತಿ ನೀಡಲಾಗುತ್ತಿದೆ.
ಈ ಸಮುದಾಯದ ಜನರನ್ನು ಈಗ ನೇರವಾಗಿ ಅಥವಾ ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ನೇಮಕ ಮಾಡಿಕೊಳ್ಳಬಹುದು ಎಂದು ಬಿಹಾರ ಸರ್ಕಾರ ನಿರ್ಧರಿಸಿದೆ. ಪೊಲೀಸ್ ಅಧೀಕ್ಷಕರಿಗೆ ಅವರನ್ನು ನೇರವಾಗಿ ಕಾನ್ಸ್ಟೆಬಲ್ ಆಗಿ ನೇಮಿಸುವ ಅಧಿಕಾರವಿರುತ್ತದೆ ಮತ್ತು ಅವರನ್ನು ಸಬ್ಇನ್ಸ್ಪೆಕ್ಟರ್ (ಎಸ್ಐ) ನೇಮಕ ಮಾಡುವ ಅಧಿಕಾರ ಡಿಐಜಿಗೆ ಇರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.