ಶ್ರೀರಾಮನ ಸೇವೆ ರಾಷ್ಟ್ರ ಸೇವೆ ಎಂಬ ಮಾತು ಮನೆ ಮಾತಾಗುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಸಮಾಜದ ಕಟ್ಟ ಕಡೆಯ ವ್ಯಕ್ತಿಯಿಂದ ಹಿಡಿದು ಆಗರ್ಭ ಸಿರಿವಂತರು ಶ್ರೀರಾಮನ ಭವ್ಯ ಮಂದಿರದ ನಿಧಿ ಸಮರ್ಪಣಾ ಸಲುವಾಗಿ ತಮ್ಮ ಪಾಲಿನ ನಿಧಿಯನ್ನು ಅತಿ ಉತ್ಸಾಹದಿಂದ ನೀಡುತ್ತಿದ್ದಾರೆ. ಸ್ವಂತ ದುಡಿಮೆಯ ಹಣವನ್ನು ರಾಮನ ಕಾರ್ಯಕ್ಕೆ ನೀಡುತ್ತಿರೋದು ಭಕ್ತಿ ಭಾವ ಇನ್ನು ಇರೋದು ಪಕ್ಕ ಅಂತ ಸಾಬೀತಾಗುತ್ತಿದೆ.
ಆತರ ವಿಶೇಷ ವ್ಯಕ್ತಿಗಳು ರಾಮನ ಕಾರ್ಯಕ್ಕೆ ನೀಡುತ್ತಿರುವ ನಿಧಿಯ ಪ್ರೇರಣಾದಾಯಿ ಘಟನೆಗಳನ್ನು ನಡೆಯುತ್ತಿವುದನ್ನು ತಿಳಿಸುವ ಸಣ್ಣ ಪ್ರಯತ್ನವಿದು.
ಬಾಗಲಕೋಟೆಯ ನವನಗರದ ನಿವಾಸಿಯಾದ ಬಲಭೀಮರಾವ ಪವಾರ (ಪೊಲೀಸ್) ಅವರ 14 ವರ್ಷದ ಹಾಗೂ 9 ವರ್ಷದ ಸುಪುತ್ರರಾದ ರೋಹನ ಹಾಗೂ ರೋಹಿತರು ಮನೆಯಲ್ಲಿ ತಿಂಡಿ ತಿನಿಸುಗಳನ್ನು ತಿನ್ನಲು ನೀಡಿದ ಹಣವನ್ನು ಎರಡುವರೆ ವರ್ಷಗಳಿಂದ ಹುಂಡಿಯಲ್ಲಿ ಕೂಡಿಟ್ಟು, ಆ ಹಣವನ್ನು ಇಂದು ಶ್ರೀರಾಮ ಮಂದಿರಕ್ಕೆ ನಿಧಿಯಾಗಿ ಸಮರ್ಪಿಸಿದ್ದಾರೆ.
ಅಷ್ಟು ಚಿಕ್ಕ ವಯಸ್ಸಿಗೆ ಈ ರೀತಿಯ ವಿವೇಚನೆ ಬರೋದು ಮಾತ್ರ ಮನೆಯ ಒಳ್ಳೆಯ ಸಂಸ್ಕಾರದಿಂದ. ತಾಯಿಯ ಒಳ್ಳೆಯ ವಿಚಾರಗಳ ಭೋದನೆಯಿಂದ. ಆ ಇಬ್ಬರು ಮಕ್ಕಳು ಎಂಟನೇ ತರಗತಿ, ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.
ಫೆಬ್ರುವರಿ 14, 2019 ರಂದು ನಡೆದ ಫುಲ್ವಾಮಾ ದಾಳಿಯಲ್ಲಿ ಬಲಿಯಾದ ನಮ ಹುತಾತ್ಮ ಯೋಧರಿಗೆ ಈ ಹಣವನ್ನು ಸಮರ್ಪಿಸಬೇಕೆಂದು ಅಂದುಕೊಂಡಿದ್ದರಂತೆ. ಹೀಗೆ ಎರಡ್ಮೂರು ಸಾರಿ ರಾಷ್ಟ್ರದ ಕಾರ್ಯಕ್ಕೆ ಈ ಹಣವನ್ನು ನೀಡಬೇಕೆನಿಸಿದಾಗ ಅಸಾಧ್ಯವಾದುದರ ಬಗ್ಗೆ ಈಗಲೂ ಆ ಮಕ್ಕಳಲ್ಲಿ ಖೇದವಿತ್ತು. ಆದರೆ ಪಾಪ ಆ ಮಕ್ಕಳಿಗೇನು ಗೊತ್ತು ಆ ದುಡ್ಡು ರಾಷ್ಟ್ರದ ಮಹಾನ್ ಕಾರ್ಯಕ್ಕೆ ತನ್ನನ್ನು ಬಳಸಿಕೊಳ್ಳಲು ಆ ದುಡ್ಡೆ ಅಪೇಕ್ಷೆಪಟ್ಟಿತ್ತಂತ. ಈ ಹಿಂದೆ ಎರಡ್ಮೂರು ಸಾರಿ ಹಣ ಕೊಡಲು ಸಾಧ್ಯವಾಗದ ಘಟನೆಗಳಿಗಿಂತ ಹೆಚ್ಚಿನ ಒಳ್ಳೆಯ ಕಾರ್ಯಕ್ಕೆ ಈ ದುಡ್ಡು ಸಮರ್ಪಿಸಲಾಗಿದೆ ಅನ್ನುವ ಹೆಮ್ಮೆ ಮಾತ್ರ ಅವರ ಮೊಗದಲ್ಲಿತ್ತು. ರಾಷ್ಟ್ರದ ವಿಚಾರಗಳಿಗೆ ಸದಾ ಸ್ಪಂದಿಸಲು ಉತ್ಸಾಹ ತೋರುವ ಈ ತರಹದ ಬಾಲಕರೇ ನಮ್ಮ ಮುಂದಿನ ಪೀಳಿಗೆಯನ್ನು ನಡೆಸುವ ಮಹಾನ್ ಯುವಶಕ್ತಿಯ ಪ್ರತಿರೂಪ.
ಬಾಗಲಕೋಟೆಯಲ್ಲಿ ಪ್ರತಿ ವರ್ಷ ರಾಮನವಮಿಯಲ್ಲಿ ವಿಶ್ವ ಹಿಂದು ಪರಿಷತ್ತು ನಡೆಸುವ ವೇಷಭೂಷಣ ಸ್ಪರ್ಧೆಯಲ್ಲಿಯೂ ಹಿಂದೆ ಈ ಪುಟ್ಟ ಬಾಲಕ ಪ್ರಥಮ ಸ್ಥಾನ ಪಡೆದಿದ್ದನಂತೆ. ಅದರ ಪ್ರತಿಫಲವೇ ಶ್ರೀರಾಮನ ಅನುಗ್ರಹದಿಂದ ತನಗಾಗಿ ಕೂಡಿಟ್ಟ ಹಣವನ್ನು ರಾಮನಿಗಾಗಿ ಸಮರ್ಪಿಸಿರೋದು.
ಮಕ್ಕಳು ತಂದೆ ತಾಯಿಗಳಿಗೆ ಏನೇ ಮಾಡಿದರೂ ಖುಷಿ ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರಕ್ಕಾಗಿ ಬಯಸುವ ಸೇವೆಯನ್ನು ಕಣ್ಣಾರೆ ಕಾಣುವ ತಂದೆ ತಾಯಿಗಳೆ ಧನ್ಯರು. ಮಕ್ಕಳು ನೂರು ಕೋಟಿ ಆಸ್ತಿ ಮಾಡಿದಾಗಲೂ ತಂದೆ ತಾಯಿಗಳಿಗೆ ಇಷ್ಟು ಖುಷಿ ಕೊಡೋಲ್ಲ. ಸಮಾಜಕ್ಕಾಗಿ ಬದುಕುವ , ಸಮಾಜದಲ್ಲಿನ ಜನರಿಗೆ ಪ್ರೇರಣೆ ಕೊಡುವ ಚಿಕ್ಕ ಮಕ್ಕಳ ಪಡೆದ ಆ ತಂದೆ ತಾಯಿಗಳ ಖುಷಿ ಅಪಾರವಾದುದು.
ರಾಮನ ಸೇತುವೆ ಸಲುವಾಗಿ ಅಳಿಲು ಸಹಿತ ತನ್ನ ಸೇವೆಯನ್ನು ಪ್ರಭು ಶ್ರೀರಾಮನಿಗೆ ಅರ್ಪಿಸುವ ಘಟನೆ ನೆನಪಿಗೆ ಬರುತ್ತದೆ. ರಾಮನ ಸೇವೆಗಾಗಿ ಈ ಪುಟ್ಟ ಮಕ್ಕಳು ಅಳಿಲು ಸೇವೆಯ ರೂಪದಲ್ಲಿ ತನ್ನ ಕರ್ತವ್ಯವನ್ನು ನಿಭಾಯಿಸುವುದರ ಮೂಲಕ ಇತರರಿಗೆ ಮಾದರಿಯಾದರು.
ಕೋಟಿ ಕೋಟಿ ಹಣ ಆಸ್ತಿ ಇದ್ದರು ಹತ್ತು ರೂಪಾಯಿಗಳನ್ನು ಕೊಡೋಕು ಯೋಚಿಸುವವರ ಮಧ್ಯೆ ಏನೂ ಯೋಚಿಸದೆ ಎರಡುವರೆ ವರ್ಷ ಕೂಡಿಟ್ಟ ಹಣವನ್ನು ಪ್ರಭು ಶ್ರೀರಾಮನ ಮಂದಿರ ಕಾರ್ಯಕ್ಕೆ ನೀಡುವ ಈ ಚಿಕ್ಕ ಮಕ್ಕಳ ದೊಡ್ಡಗುಣ ಮಾತ್ರ ಅತಿಶ್ರೇಷ್ಠವಾದುದು. ಈ ತರಹ ಮಕ್ಕಳಿಗೆ ಪ್ರಭು ಶ್ರೀರಾಮ ಅನುಗ್ರಹ ತೊರಿ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳನ್ನಾಗಿ ರೂಪಗೊಳಿಸಿ ಮನೆಗೆ, ಹಾಗೂ ದೇಶಕ್ಕೆ ಮಾದರಿಯನ್ನಾಗಿ ಮಾಡಲಿ ಎನ್ನುವ ಆಶಯದೊಂದಿಗೆ.
✍️ ಸುರೇಶ ಮಾಗಿ, ಬಾಗಲಕೋಟೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.