ನವದೆಹಲಿ: ಇಂದು ಭಾರತ ತನ್ನ 73 ನೇ ಸೇನಾ ದಿನವನ್ನು ಆಚರಿಸುತ್ತಿದೆ, ಎಲ್ಲಾ ಆರ್ಮಿ ಕಮಾಂಡ್ ಪ್ರಧಾನ ಕಚೇರಿಗಳು ದೇಶದ ಸೈನಿಕರ ನೆನಪಿಗಾಗಿ ಸೇನಾ ದಿನವನ್ನು ಆಚರಿಸುತ್ತವೆ. 1949 ರಲ್ಲಿ ಈ ದಿನದಂದು ಭಾರತೀಯ ಸೇನೆಯು ಮೊದಲ ಸೇನಾ ಮಹಾದಂಡ ನಾಯಕನನ್ನು ಪಡೆದುಕೊಂಡಿತು. ಲೆಫ್ಟಿನೆಂಟ್ ಜನರಲ್ ಕೆ.ಎಂ. ಕರಿಯಪ್ಪ ಅವರು ಈ ಹುದ್ದೆಯನ್ನು ಅಲಂಕರಿಸಿದರು.
ಶೌರ್ಯ ಪ್ರಶಸ್ತಿಗಳು ಮತ್ತು ಸೇನಾ ಪದಕಗಳನ್ನು ಸಹ ಈ ದಿನ ನೀಡಲಾಗುತ್ತದೆ. ಈ ದಿನವನ್ನು ವಿವಿಧ ಸೇನಾ ಕಮಾಂಡ್ ಕೇಂದ್ರಗಳಲ್ಲಿ ಮಿಲಿಟರಿ ಮೆರವಣಿಗೆಗಳೊಂದಿಗೆ ಆಚರಿಸಲಾಗುತ್ತದೆ. ಆ ಮೆರವಣಿಗೆಗಳಲ್ಲಿ ವಿವಿಧ ವೈಮಾನಿಕ ಸಾಹಸಗಳು ಮತ್ತು ಬೈಕ್ ಪಿರಮಿಡ್ಗಳನ್ನು ಪ್ರದರ್ಶಿಸಲಾಗುತ್ತದ.
ಸೇನಾ ದಿನದ ಹಿನ್ನೆಲೆಯಲ್ಲಿ ಟ್ವಿಟ್ ಮಾಡಿರುವ ಮೋದಿ, “ತಾಯಿ ಭಾರತೀಯ ರಕ್ಷಣೆಯಲ್ಲಿ ನಿರತರಾಗಿರುವ ದೇಶದ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಸೇನಾ ದಿನದಂದು ಅಭಿನಂದನೆಗಳು. ನಮ್ಮ ಸೈನ್ಯವು ಪ್ರಬಲ, ಧೈರ್ಯಶಾಲಿ ಮತ್ತು ದೃಢನಿಶ್ಚಯದಿಂದ ಕೂಡಿದ್ದು, ಇದು ಸದಾ ದೇಶದ ತಲೆಯನ್ನು ಹೆಮ್ಮೆಯಿಂದ ಎತ್ತುವಂತೆ ಮಾಡಿದೆ. ನಾನು ಎಲ್ಲಾ ದೇಶವಾಸಿಗಳ ಪರವಾಗಿ ಭಾರತೀಯ ಸೇನೆಗೆ ವಂದಿಸುತ್ತೇನೆ” ಎಂದಿದ್ದಾರೆ.
मां भारती की रक्षा में पल-पल मुस्तैद देश के पराक्रमी सैनिकों और उनके परिजनों को सेना दिवस की हार्दिक बधाई। हमारी सेना सशक्त, साहसी और संकल्पबद्ध है, जिसने हमेशा देश का सिर गर्व से ऊंचा किया है। समस्त देशवासियों की ओर से भारतीय सेना को मेरा नमन।
— Narendra Modi (@narendramodi) January 15, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.