ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಷ್ಟ್ರವ್ಯಾಪಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಪ್ರಾರಂಭಿಸಲಿದ್ದಾರೆ. ಮೊದಲ ದಿನ ಸುಮಾರು 3 ಲಕ್ಷ ಜನರು ಡೋಸ್ಗಳನ್ನು ಸ್ವೀಕರಿಸಲಿದ್ದಾರೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ತಿಳಿಸಿದ್ದಾರೆ.
“ಪಿಎಂ ಮೋದಿ ಶನಿವಾರ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದಾರೆ. ವಿವರಗಳನ್ನು ರೂಪಿಸಲಾಗುತ್ತಿದೆ” ಎಂದಿದ್ದಾರೆ.
“ವ್ಯಾಕ್ಸಿನೇಷನ್ ಡ್ರೈವ್ ಶನಿವಾರ 3,000 ತಾಣಗಳಲ್ಲಿ ಪ್ರಾರಂಭವಾಗಲಿದೆ. ಪ್ರತಿ ಕೇಂದ್ರವು ದಿನಕ್ಕೆ 100 ಜನರಿಗೆ ಚುಚ್ಚುಮದ್ದನ್ನು ನೀಡುತ್ತದೆ. ಕಾರ್ಯಕ್ರಮವು ಮುಂದುವರೆದಂತೆ, ಇದನ್ನು 5,000 ತಾಣಗಳು ಮತ್ತು ಹೆಚ್ಚಿನವುಗಳಿಗೆ ಏರಿಕೆ ಮಾಡಲಾಗುತ್ತದೆ” ಎಂದು ಪಾಲ್ ಹೇಳಿದ್ದಾರೆ.
ಮುಂದಿನ ಕೆಲವು ತಿಂಗಳುಗಳಲ್ಲಿ 300 ಮಿಲಿಯನ್ ಹೆಚ್ಚು ಅಪಾಯದ ಜನರಿಗೆ ಲಸಿಕೆ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಡೋಸ್ ಪಡೆದವರಲ್ಲಿ ಮೊದಲಿಗರು 30 ಮಿಲಿಯನ್ ಆರೋಗ್ಯ ಮತ್ತು ಇತರ ಮುಂಚೂಣಿ ಕಾರ್ಯಕರ್ತರು, ನಂತರ ಸುಮಾರು 270 ಮಿಲಿಯನ್ 50 ಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಲಸಿಕೆ ಪಡೆಯಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.