ಕೋಲ್ಕತ್ತಾ: ಕಳೆದ ನಾಲ್ಕು ವರ್ಷಗಳಲ್ಲಿ ಪಶ್ಚಿಮ ಬಂಗಾಳದ ಕೆಲವು ಗಡಿ ಜಿಲ್ಲೆಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ ಎಂಬ ಆತಂಕ ವ್ಯಕ್ತಪಡಿಸಿರುವ ಬಿಜೆಪಿ, ಗುರುವಾರ ಚುನಾವಣಾ ಆಯೋಗವನ್ನು ಸಂಪರ್ಕಿಸಿ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದೆ.
“ಪಶ್ಚಿಮ ಬಂಗಾಳದಲ್ಲಿ 2016 ಮತ್ತು 2020 ರ ನಡುವೆ ಏರಿಕೆಯಾದ ಮತದಾರರ ಸಂಖ್ಯೆ 63 ಲಕ್ಷ. ಮುರ್ಷಿದಾಬಾದ್ನ ಮಾಲ್ಡಾದ ಗಡಿ ಜಿಲ್ಲೆಗಳಲ್ಲಿ ಈ ಏರಿಕೆ ಆತಂಕಕಾರಿಯಾಗಿದೆ, ಇಲ್ಲಿ ಮತದಾರರ ಸಂಖ್ಯೆ ಶೇಕಡಾ 14 ರಷ್ಟು ಹೆಚ್ಚಳವಾಗಿದೆ. ಉತ್ತರ ದಿನಾಜ್ಪುರದಲ್ಲಿ ಶೇ 13 ರಷ್ಟು ಏರಿಕೆ ದಾಖಲಾದರೆ, ದಕ್ಷಿಣ 24 ಪರಗಣ ಮತ್ತು ದಕ್ಷಿಣ ದಿನಾಜ್ಪುರದಲ್ಲಿ ಶೇ 11 ರಷ್ಟು ಏರಿಕೆ ಕಂಡಿದೆ ”ಎಂದು ಬಬಿಜೆಪಿ ಹೇಳಿದೆ.
ಕರಡು ಮತದಾರರ ಪಟ್ಟಿಯಲ್ಲಿ ಗಂಭೀರ ವ್ಯತ್ಯಾಸಗಳಿವೆ ಎಂದು ಬಿಜೆಪಿ ಆರೋಪಿಸಿದ್ದು, ಮೂರು ವರ್ಷಗಳಲ್ಲಿ ಶೇಕಡಾ 9.6 ರಷ್ಟು ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಪಕ್ಷದ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಸುಮಾರು 23 ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಕನಿಷ್ಠ 20 ಶೇಕಡಾ ಹೆಚ್ಚಳವಾಗಿದೆ ಎಂದಿದೆ.
“ನಾವು ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದೇವೆ. ಮತದಾರರ ಸಂಖ್ಯೆ ಶೇಕಡಾ 10 ಕ್ಕಿಂತ ಹೆಚ್ಚಾಗಿರುವುದು ಖಂಡಿತವಾಗಿಯೂ ಆತಂಕಕಾರಿಯಾಗಿದೆ. ಪರಿಶೀಲನೆಗೆ ನಾವು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದೇವೆ” ಎಂದು ಬಿಜೆಪಿ ವಕ್ತಾರರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.