ನವದೆಹಲಿ: ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ)ದಿಂದ 110 ಲಕ್ಷ ಲಸಿಕೆ ಡೋಸ್ ಅನ್ನು ಮತ್ತು ಭಾರತ್ ಬಯೋಟೆಕ್ನಿಂದ 55 ಲಕ್ಷ ಡೋಸ್ಗಳನ್ನು ಸರ್ಕಾರ ಆದೇಶಿಸಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಈ ಸರಬರಾಜು ಜನವರಿ 14 ರೊಳಗೆ ದೇಶದ ವಿವಿಧ ಕೇಂದ್ರಗಳನ್ನು ತಲುಪಲಿದೆ.
ವ್ಯವಸ್ಥಾಪನಾ ಮಿತಿಗಳು ಮತ್ತು ಲಸಿಕೆಯ ಲಭ್ಯತೆಯಿಂದಾಗಿ ವ್ಯಕ್ತಿಗಳಿಗೆ ತಮ್ಮ ಆದ್ಯತೆಯ ಕೋವಿಡ್ -19 ಲಸಿಕೆಗಳನ್ನು ಆಯ್ಕೆ ಮಾಡುವ ಆಯ್ಕೆ ಇರುವುದಿಲ್ಲ ಎಂದು ಭೂಷಣ್ ಮಾಹಿತಿ ನೀಡಿದ್ದಾರೆ.
“ಯಾವುದೇ ದೇಶದಲ್ಲಿ ಜನರಿಗೆ ಲಸಿಕೆಗಳನ್ನು ಆಯ್ಕೆ ಮಾಡುವ ಯಾವುದೇ ಆಯ್ಕೆ ಲಭ್ಯವಿಲ್ಲ. ನಮ್ಮ ಪೂರೈಕೆ ಆದೇಶಗಳು ಮೊದಲು ಪೂರೈಕೆ ಯಾಗಬೇಕಿದೆ ” ಎಂದು ಆರೋಗ್ಯ ಕಾರ್ಯದರ್ಶಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಸೀರಮ್ ತನ್ನ ಕೋವಿಶೀಲ್ಡ್ ಕೋವಿಡ್ -19 ಲಸಿಕೆಯನ್ನು ಪ್ರತಿ ಡೋಸ್ಗೆ 200 ರೂ. ಮತ್ತು ಭಾರತ್ ಬಯೋಟೆಕ್ನ ಕೋವಾಕ್ಸಿನ್ ತೆರಿಗೆ ಹೊರತುಪಡಿಸಿ ಪ್ರತಿ ಡೋಸ್ಗೆ 295 ರೂ.ಅಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.
ಇದಲ್ಲದೆ, ಭಾರತ್ ಬಯೋಟೆಕ್ 16.5 ಲಕ್ಷ ಡೋಸ್ ಕೋವಾಕ್ಸಿನ್ ಅನ್ನು ಸರ್ಕಾರಕ್ಕೆ ಉಚಿತವಾಗಿ ಪೂರೈಸುತ್ತಿದೆ.
ಎರಡೂ ಲಸಿಕೆಗಳು ಭಾರತದಲ್ಲಿ ತಯಾರಾದ ಕಾರಣ ದೇಶದಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಿದೆ ಎಂದು ನೀತಿ ಆಯೋಗದ ಡಾ.ವಿನೋದ್ ಪಾಲ್ ಹೇಳಿದ್ದಾರೆ. ಈ ಲಸಿಕೆ ಗಳಲ್ಲಿ ಅಡ್ಡಪರಿಣಾಮಗಳು ಇಲ್ಲ ಎಂದು ಅವರು ಭರವಸೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.