ಪಣಜಿ: ಬೀಚ್ಗಳಲ್ಲಿ ಮೋಜು ಮಸ್ತಿ ಮಾಡಿ ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವವರಿಗೆ ಗೋವಾ ಸರ್ಕಾರ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಿದೆ.
ಹೊಸ ವರ್ಷದ ಸಂಭ್ರಮಾಚರಣೆಯ ನಂತರ ಹಲವಾರು ಪ್ರದೇಶಗಳಲ್ಲಿ ಕಸದ ರಾಶಿ ಕಂಡು ಬಂದ ನಂತರ ಎಚ್ಚೆತ್ತುಕೊಂಡಿರುವ ಗೋವಾ ಪ್ರವಾಸೋದ್ಯಮ ಇಲಾಖೆಯು ಕಡಲತೀರಗಳಲ್ಲಿ ಕುಡಿಯುವವರಿಗೆ 10,000 ರೂ. ದಂಡ ವಿಧಿಸುವುದಾಗಿ ಘೋಷಿಸಿದೆ.
ರಾಜ್ಯ ಪ್ರವಾಸೋದ್ಯಮ ನಿರ್ದೇಶಕ ಮೆನಿನೊ ಡಿಸೋಜ ಈ ಬಗ್ಗೆ ತಿಳಿಸಿದ್ದು, ಕಡಲತೀರಗಳಲ್ಲಿ ಕುಡಿಯುವುದರ ವಿರುದ್ಧ ಜನರಿಗೆ ಎಚ್ಚರಿಕೆ ನೀಡುವ ಬೋರ್ಡ್ ಗಳನ್ನು ಸ್ಥಾಪಿಸಲಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರವು 2019 ರ ಜನವರಿಯಲ್ಲಿ ಪ್ರವಾಸಿ ವ್ಯಾಪಾರ ಕಾಯ್ದೆಗೆ ತಿದ್ದುಪಡಿ ಮಾಡಿ ವ್ಯಕ್ತಿಗಳಿಗೆ 2,000 ರೂ. ಮತ್ತು ಕಡಲತೀರಗಳಲ್ಲಿ ಕುಡಿಯುವ ಗುಂಪುಗಳಿಗೆ 10,000 ರೂ. ದಂಡ ವಿಧಿಸಲು ಅನುವು ಮಾಡಿಕೊಟ್ಟಿದೆ ಎಂದಿದ್ದಾರೆ.
“ಪ್ರವಾಸೋದ್ಯಮ ಇಲಾಖೆಯು ತಿದ್ದುಪಡಿ ಮಾಡಿದ ಕಾಯ್ದೆಯನ್ನು ಪೊಲೀಸರ ಮೂಲಕ ಜಾರಿಗೊಳಿಸುತ್ತದೆ. ಒಮ್ಮೆ ನಮ್ಮ ಪ್ರವಾಸಿ ಪೊಲೀಸ್ ಪಡೆ ಹೊಂದಿದರೆ, ನಾವು ಅದನ್ನು ನಮ್ಮದೇ ಆದ ರೀತಿಯಲ್ಲಿ ಮಾಡಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.