ನವದೆಹಲಿ: ಇಯರ್ಫೋನ್ಗಳು, ಹೆಡ್ಫೋನ್ಗಳು, ಸ್ಪೀಕರ್ಗಳು ಮತ್ತು ಸ್ಮಾರ್ಟ್ ವಾಚ್ಗಳಂತಹ ಉತ್ಪನ್ನಗಳನ್ನು ಮಾರಾಟ ಮಾಡುವ ಬ್ರ್ಯಾಂಡ್ ಬೋಟ್ ಲೈಫ್ಸ್ಟೈಲ್ (boAt Lifestyle) ಚೀನಾದಿಂದ ಭಾರತಕ್ಕೆ ಹೆಚ್ಚಿನ ಉತ್ಪಾದನೆಯನ್ನು ವರ್ಗಾಯಿಸಲು ಮುಂದಾಗಿದೆ. ಕೇಂದ್ರ ಸರ್ಕಾರದ ಪ್ರಸ್ತಾವಿತ ಉತ್ಪನ್ನ ಸಂಪರ್ಕಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗೆ ಸ್ಪಂದಿಸಿ ಈ ನಿರ್ಧಾರ ತೆಗೆದುಕೊಂಡಿದೆ.
ಬೋಟ್ ಇತ್ತೀಚೆಗೆ ಯುಎಸ್ ಮೂಲದ ಖಾಸಗಿ ಇಕ್ವಿಟಿ ದಿಗ್ಗಜಕ ವಾರ್ಬರ್ಗ್ ಪಿಂಕಸ್ನಿಂದ $100 ಮಿಲಿಯನ್ ಹೂಡಿಕೆಯನ್ನು ಪಡೆದುಕೊಂಡಿದೆ ಮತ್ತು ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಬಂಡವಾಳವನ್ನು ಬಳಸಲು ಮತ್ತು ಅದರ ಹೆಚ್ಚಿನ ಉತ್ಪಾದನೆಯನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸಲು ಯೋಜಿಸಿದೆ ಎಂದು ವರದಿಗಳು ತಿಳಿಸಿವೆ.
ವರದಿಯ ಪ್ರಕಾರ, ಬೋಟ್ ಸಂಸ್ಥಾಪಕರಾದ ಅಮನ್ ಗುಪ್ತಾ ಮತ್ತು ಸಮೀರ್ ಮೆಹ್ತಾ ಅವರು ಸರ್ಕಾರದ ಪ್ರಸ್ತಾವಿತ ಪಿಎಲ್ಐ ಯೋಜನೆಯ ಲಾಭ ಪಡೆಯಲು ಬಯಸುತ್ತಿದ್ದಾರೆ.
ತಕ್ಷಣಕ್ಕೆ ಯಾವುದೇ ಪ್ರಯೋಜನವಿಲ್ಲದಿದ್ದರೂ ಸ್ಥಳೀಯ ಉತ್ಪಾದನೆಗೆ ಸರ್ಕಾರದ ಬೆಂಬಲವು ಅಂತಿಮವಾಗಿ ಆರ್ಥಿಕವಾಗಿ ಪರಿಣಮಿಸುತ್ತದೆ ಎಂದು ಗುಪ್ತಾ ಭರವಸೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.