ಅಹ್ಮದಾಬಾದ್: ಮಾಸ್ಕ್ ಧರಿಸದವರಿಗೆ ಗುಜರಾತ್ ಹೈಕೋರ್ಟ್ ಮಹತ್ವದ ಶಿಕ್ಷೆಯನ್ನೇ ವಿಧಿಸಿದೆ. ಕಡ್ಡಾಯ ಮಾಸ್ಕ್ ಧರಿಸಬೇಕು ಎಂಬ ನಿಯಮವನ್ನು ಉಲ್ಲಂಘಿಸಿದವರಿಗೆ ʼಕೋವಿಡ್-19 ಆರೈಕೆ ಕೇಂದ್ರʼಗಳಲ್ಲಿ ಸೇವೆ ಸಲ್ಲಿಸುವ ದಂಡನೆಯನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸುವಂತೆಯೂ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಮುಖಗವಸು ನಿಯಮಗಳನ್ನು ಉಲ್ಲಂಘಿಸುವ ಜನರು ಸಂಬಂಧಪಟ್ಟ ಪ್ರಾಧಿಕಾರದ ಸೂಚನೆಯಂತೆ 5 ರಿಂದ 15 ದಿನಗಳವರೆಗೆ ಕೋವಿಡ್-19 ಆರೈಕೆ ಕೇಂದ್ರಗಳಲ್ಲಿ ಸುಮಾರು ನಾಲ್ಕರಿಂದ ಐದು ಗಂಟೆಗಳ ಸಮುದಾಯ ಸೇವೆಯನ್ನು ಮಾಡಬೇಕಾಗುತ್ತದೆ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.
ಹೈಕೋರ್ಟ್ ಆದೇಶದ ಪ್ರಕಾರ, ಮುಖಗವಸುಗಳನ್ನು ಧರಿಸದಿರುವ ಜನರು ಸ್ವಚ್ಛಗೊಳಿಸುವಿಕೆ, ಮನೆಗೆಲಸ, ಅಡುಗೆ, ಸಹಾಯ, ಸೇವೆ ಸೇರಿದಂತೆ ವೈದ್ಯಕೀಯೇತರ ಕರ್ತವ್ಯವನ್ನು ಕೈಗೊಳ್ಳಬೇಕಾಗುತ್ತದೆ ಮತ್ತು ದಂಡವನ್ನು ಕೂಡ ನೀಡಬೇಕಾಗುತ್ತದೆ.
ಅಪರಾಧಿಗಳಿಗೆ ಅವರ ವಯಸ್ಸು, ಲಿಂಗ, ಅರ್ಹತೆ ಮತ್ತು ಸ್ಥಾನಮಾನವನ್ನು ಅವಲಂಬಿಸಿ ಸಂಬಂಧಪಟ್ಟ ಅಧಿಕಾರಿಗಳು ಕರ್ತವ್ಯಗಳಿಗೆ ನಿಯೋಜಿಸುತ್ತಾರೆ ಎಂದು ವರದಿ ಹೇಳಿದೆ. ಗುಜರಾತ್ ಹೈಕೋರ್ಟ್ ಹೊರಡಿಸಿದ ಈ ಆದೇಶವು ನಿಜಕ್ಕೂ ಮಾದರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.