ನವದೆಹಲಿ: ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ರೆಡ್ ಮೀಟ್ ಕೈಪಿಡಿಯಿಂದ ‘ಹಲಾಲ್’ ಪದವನ್ನು ಕೈಬಿಟ್ಟಿದೆ. ಎಪಿಇಡಿಎ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿದೆ. ಕೃಷಿ ಉತ್ಪನ್ನಗಳ ರಫ್ತು ಉತ್ತೇಜನಕ್ಕಾಗಿ ಇದು ಕಾರ್ಯನಿರ್ವಹಿಸುತ್ತದೆ.
ಹೊಸ ಕೈಪಿಡಿಯಲ್ಲಿ ಈಗ ಹೀಗಿ ಬರೆಯಲಾಗಿದೆ- “ದೇಶಕ್ಕೆ ಆಮದು ಮಾಡಿಕೊಳ್ಳುವ / ಆಮದು ಅವಶ್ಯಕತೆಗಾಗಿ ಪ್ರಾಣಿಗಳನ್ನು ಕೊಲ್ಲಲಾಗುತ್ತದೆ”.
ಹಳೆಯ ಆವೃತ್ತಿಯಲ್ಲಿ, “ಇಸ್ಲಾಮಿಕ್ ರಾಷ್ಟ್ರಗಳ ಅಗತ್ಯವನ್ನು ಪೂರೈಸಲು ಹಲಾಲ್ ವಿಧಾನದ ಪ್ರಕಾರ ಪ್ರಾಣಿಗಳನ್ನು ಕಟ್ಟುನಿಟ್ಟಾಗಿ ಕೊಲ್ಲಲಾಗಿದೆ” ಎಂದು ಬರೆಯಲಾಗುತ್ತಿತ್ತು.
ಹಲಾಲ್ ಎನ್ನುವುದು ಇಸ್ಲಾಂ ಧರ್ಮದ ಅಡಿಯಲ್ಲಿ ಅನುಮತಿಸಲಾದ ಮಾಂಸವಾಗಿದೆ. ಹಲವಾರು ಇಸ್ಲಾಮಿಕ್ ರಾಷ್ಟ್ರಗಳು ಹಲಾಲ್ ಮಾಂಸವನ್ನು ಮಾತ್ರ ಆಮದು ಮಾಡಿಕೊಳ್ಳುತ್ತವೆ.
ಹಲಾಲ್ ಪದ ಬಳಕೆಯು ರಫ್ತುದಾರರಿಗೆ ಹಲಾಲ್ ಮಾಂಸವನ್ನು ಮಾತ್ರ ಖರೀದಿಸುವುದನ್ನು ಕಡ್ಡಾಯಗೊಳಿಸುತ್ತದೆ ಎಂದು ಆರೋಪಿಸಿ ನಡೆದ ತೀವ್ರವಾದ ಚರ್ಚೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಎಪಿಇಡಿಎ ಪ್ರಕಾರ, ಹಲಾಲ್ ಮಾಂಸಕ್ಕೆ ಸಂಬಂಧಿಸಿದಂತೆ ಸರ್ಕಾರದ ಕಡೆಯಿಂದ ಯಾವುದೇ ಷರತ್ತು ಇರಲಿಲ್ಲ. ಇದು ಆಮದು ಮಾಡಿಕೊಳ್ಳುವ ಹೆಚ್ಚಿನ ದೇಶಗಳು / ಆಮದುದಾರರ ಅವಶ್ಯಕತೆಯಾಗಿದೆ ಎಂದು ಅದು ಹೇಳಿದೆ.
“ಹಲಾಲ್ ಪ್ರಮಾಣೀಕರಣ ಏಜೆನ್ಸಿಗಳು ಆಯಾ ಆಮದು ದೇಶಗಳಿಂದ ನೇರವಾಗಿ ಮಾನ್ಯತೆ ಪಡೆದಿವೆ. ಇದರಲ್ಲಿ ಯಾವುದೇ ಸರ್ಕಾರಿ ಸಂಸ್ಥೆಗೆ ಯಾವುದೇ ಪಾತ್ರವಿಲ್ಲ” ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.