ನವದೆಹಲಿ: ದೇಶದಲ್ಲಿ ಕೋವಿಡ್-19 ಲಸಿಕೆ ಅಭಿಯಾನ ಮತ್ತು ಸಾರ್ವಜನಿಕ ಇಮ್ಯುನೈಸೇಶನ್ ಕಾರ್ಯಕ್ರಮಕ್ಕಾಗಿ 83 ಕೋಟಿ ಸಿರಿಂಜ್ಗೆ ಸರ್ಕಾರ ಆರ್ಡರ್ ನೀಡಿದೆ.
ಕೇಂದ್ರವು 35 ಕೋಟಿ ಸಿರಿಂಜ್ ನ ಬಿಡ್ಗಳನ್ನು ಕೂಡ ಆಹ್ವಾನಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿಯಲ್ಲಿರುವ ಕಾರ್ಯಕರ್ತರು ಮತ್ತು ನೈರ್ಮಲ್ಯ ಸಿಬ್ಬಂದಿಗಳನ್ನು ಒಳಗೊಂಡು 30 ಕೋಟಿ ಜನಸಂಖ್ಯೆಗೆ ಲಸಿಕೆ ನೀಡಲು ಸರ್ಕಾರ ಆದ್ಯತೆ ನೀಡಿದೆ.
ಈ ಹಿಂದೆ, ಕೋವಿಡ್-19 ರ ಲಸಿಕೆಯ ದ ರಾಷ್ಟ್ರೀಯ ತಜ್ಞರ ಗುಂಪು ಮೂರು ಆದ್ಯತೆಯ ಜನಸಂಖ್ಯೆಯ ಗುಂಪುಗಳನ್ನು ಲಸಿಕೆ ನೀಡಲು ಶಿಫಾರಸು ಮಾಡಿದೆ. ಇದರಲ್ಲಿ ಸುಮಾರು ಒಂದು ಕೋಟಿಯ ಹೆಲ್ತ್ಕೇರ್ ವರ್ಕರ್ಸ್, ಸುಮಾರು 2 ಕೋಟಿ ಫ್ರಂಟ್ಲೈನ್ ವರ್ಕರ್ಸ್ ಮತ್ತು 27 ಕೋಟಿ ಆದ್ಯತೆಯ ವಯಸ್ಸಿನ ಗುಂಪಿನ ಜನರು ಇದ್ದಾರೆ.
ಲಸಿಕೆಗಳನ್ನು ನಿರ್ದಿಷ್ಟ ತಾಪಮಾನದಲ್ಲಿ ಶೇಖರಿಸಿಡಬೇಕಾದ ಕಾರಣ, ದೇಶಾದ್ಯಂತ ಸುಮಾರು 28 ಸಾವಿರ 947 ಕೋಲ್ಡ್ ಚೈನ್ ವ್ಯವಸ್ಥೆಯನ್ನು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.