ನವದೆಹಲಿ: ವಿಶ್ವದಾದ್ಯಂತ ಇರುವ ಸುಮಾರು 3.12 ಕೋಟಿ ಪ್ರಬಲ ಅನಿವಾಸಿ ಭಾರತೀಯ ಸಮುದಾಯದೊಂದಿಗೆ ಉತ್ತಮ ಸಂಪರ್ಕ ಸಾಧಿಸುವ ಸಲುವಾಗಿ ವಿದೇಶಾಂಗ ಸಚಿವಾಲಯ ಬುಧವಾರ ಜಾಗತಿಕ ಪ್ರವಾಸಿ ರಿಷ್ತ ಪೋರ್ಟಲ್ ಮತ್ತು ಆ್ಯಪ್ ಅನ್ನು ಬಿಡುಗಡೆ ಮಾಡಿದೆ.
ಪೋರ್ಟಲ್ ಮತ್ತು ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ವಿ ಮುರಳೀಧರನ್ ಅವರು, ಈ ಪೋರ್ಟಲಗ ಸಚಿವಾಲಯ, ಭಾರತೀಯ ಕಾರ್ಯಾಚರಣೆಗಳು ಮತ್ತು ಅನಿವಾಸಿಗಳ ನಡುವೆ ಮೂರು ರೀತಿಯಲ್ಲಿ ಸಂವಹನ ನಡೆಸುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ.
ಅನಿವಾಸಿ ಭಾರತೀಯರ ಮಹತ್ವವನ್ನು ಸರ್ಕಾರ ಗುರುತಿಸುತ್ತದೆ ಮತ್ತು ಅವರೊಂದಿಗೆ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡಿದೆ. ಅಂತಹ ಒಂದು ನವೀನ ಹೆಜ್ಜೆಯೆಂದರೆ ಜಾಗತಿಕ ಪ್ರವಾಸಿ ರಿಷ್ತ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್. ಇದರ ಮೂಲಕ ಭಾರತ ಸರ್ಕಾರವು ಸಾಗರೋತ್ತರ ಭಾರತೀಯ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಉದ್ದೇಶಿಸಿದೆ, ಕೇವಲ ನಿರ್ದಿಷ್ಟ ಸಮಯದಲ್ಲಿ ಮಾತ್ರವಲ್ಲದೆ ಪ್ರತಿ ಹಂತದಲ್ಲೂ ಉತ್ತಮ ಸಂಪರ್ಕ ಹೊಂದುವುದು ಇದರ ಗುರಿ ” ಎಂದು ಅವರು ಹೇಳಿದ್ದಾರೆ.
ಮೊಬೈಲ್ ಅಪ್ಲಿಕೇಶನ್ ಅನ್ನು ಅನಿವಾಸಿಗಳು ಮತ್ತು ಭಾರತೀಯ ಪ್ರಜೆಗಳು ಬಳಸುತ್ತಾರೆ, ಆದರೆ ಪೋರ್ಟಲ್ ವೆಬ್ ಇಂಟರ್ಫೇಸ್ ಅನ್ನು ಮಿಷನ್ಗಳು ಬಳಸುತ್ತವೆ ಎಂದು ಮುರಳೀಧರನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.