ನವದೆಹಲಿ: ಗುಜರಾತಿನ ಮೊದಲ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS)) ರಾಜ್ಕೋಟ್ ನಗರದ ಹೊರವಲಯದಲ್ಲಿರುವ ಖಂಡೇರಿ ಗ್ರಾಮದಲ್ಲಿ ನಿರ್ಮಾಣವಾಗಲಿದ್ದು, ಡಿಸೆಂಬರ್ 31 ರಂದು ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
1,195 ಕೋಟಿ ರೂ.ಗಳ ವೆಚ್ಚದಲ್ಲಿ 201 ಎಕರೆ ವಿಸ್ತೀರ್ಣದಲ್ಲಿ ಈ ಏಮ್ಸ್ ನಿರ್ಮಾಣವಾಗಲಿದೆ.
ಏಮ್ಸ್ ಅನ್ನು “ಮಿನಿ-ರತ್ನ” ಸಾರ್ವಜನಿಕ ವಲಯದ ಎಚ್ಎಸ್ಸಿಸಿ ಲಿಮಿಟೆಡ್ ನಿರ್ಮಿಸಲಿದ್ದು, ಇದಕ್ಕೆ ಸಂಬಂಧಿಸಿದ ಒಂಬತ್ತು ಕಟ್ಟಡಗಳ ರೇಖಾಚಿತ್ರಗಳಿಗೆ ಈಗಾಗಲೇ ತಾತ್ಕಾಲಿಕ ಅನುಮೋದನೆ ದೊರೆತಿದೆ. ಈ ಸೌಲಭ್ಯವು ವಿಶೇಷ ಮತ್ತು ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಹೊಂದಿದ್ದು 750 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ.
ಈ ಯೋಜನೆಗೆ ಮೋದಿ ವರ್ಚುವಲ್ ಆಗಿ ಅಡಿಪಾಯ ಹಾಕಲಿದ್ದು, ಸಮಾರಂಭದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಭಾಗವಹಿಸಲಿದ್ದಾರೆ.
ರಾಜ್ಕೋಟ್ನ ಏಮ್ಸ್ನ ಮೊದಲ ಬ್ಯಾಚ್ನ ಶೈಕ್ಷಣಿಕ ಸೆಷನ್ ಅನ್ನು ಸಿಎಂ ರೂಪಾನಿ ಮತ್ತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಡಿಸೆಂಬರ್ 21 ರಂದು ಉದ್ಘಾಟಿಸಿದ್ದಾರೆ. 50 ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಒಳಗೊಂಡ ಬ್ಯಾಚ್ಗೆ ಪಂಡಿತ್ ದೀನದಯಾಲ್ ಉಪಾಧ್ಯಾಯ ವೈದ್ಯಕೀಯ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದೆ .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.