ನವದೆಹಲಿ: ಮೋಟರ್ ವಾಹನ ದಾಖಲಾತಿಗಳಾದ ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಷನ್ ಸರ್ಟಿಫಿಕೇಟ್, ಪರವಾನಗಿ (ಪರ್ಮಿಟ್) ಗಳನ್ನು ಮುಂದಿನ ವರ್ಷದ ಮಾರ್ಚ್ 31 ರ ವರೆಗೆ ಕೇಂದ್ರ ಸಾರಿಗೆ ಸಚಿವಾಲಯವು ವಿಸ್ತರಣೆ ಮಾಡಿದೆ.
ಕೊರೋನಾ ರೂಪಾಂತರ ಮತ್ತು ಕೊರೋನಾ ಎರಡನೇ ಹಂತದ ಅಲೆ ಹೆಚ್ಚಾಗುವ ಭೀತಿ ಇದ್ದು, ಈ ಹಿನ್ನೆಲೆಯಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ಇರುವ ದಾಖಲೆಗಳ ಸಿಂಧುತ್ವದ ಅವಧಿಯನ್ನು ವಿಸ್ತರಣೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 31, 2020 ರಿಂದ ಅವಧಿ ಮುಗಿದ ದಾಖಲೆಗಳಿಗೆ ಈ ವಿಸ್ತರಣೆ ಅನ್ವಯವಾಗಲಿದೆ. ಇದು ಈ ವರ್ಷದಲ್ಲಿ ಸಾರಿಗೆ ಇಲಾಖೆ 4 ನೇ ಬಾರಿಗೆ ವಾಹನ ಪರವಾನಗಿ ಅವಧಿಯ ವಿಸ್ತರಣೆಯನ್ನು ಮಾಡುತ್ತಿರುವುದಾಗಿದೆ.
ಅದರೊಂದಿಗೆ 2021 ರ ಫೆಬ್ರವರಿ 21 ರ ಒಳಗಾಗಿ ದಾಖಲೆಗಳನ್ನು ನವೀಕರಿಸುವಲ್ಲಿ ವಿಳಂಬವಾದರೆ ದಂಡ ವಿಧಿಸುವುದಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ. ಹಾಗೆಯೇ ವಾಹನ ದಾಖಲಾತಿಗಳಲ್ಲಿ ಮಾಲೀಕತ್ವದ ವಿವರಗಳಿಗೆ ಸಂಬಂಧಿಸಿದಂತೆ ವಾಹನ ನೀತಿ ಸುಧಾರಣೆಗೆ ಸಹ ಸಾರಿಗೆ ಇಲಾಖೆ ಈಗಾಗಲೇ ಅಧಿಸೂಚನೆ ಹೊರಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.