ಸಮಸ್ತ ಜೀವರಾಶಿಗಳು ಆರೋಗ್ಯ ಪೂರ್ಣವಾಗಿ ಜೀವಿಸಬೇಕಾದರೆ ಪರಿಸರ ಆರೋಗ್ಯಕರವಾಗಿರಬೇಕು. ಪರಿಸರದ ಆರೋಗ್ಯ ಕಾಪಾಡಲು ನಾನಾ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಅನೇಕ ಮಂದಿ ನಮ್ಮಲ್ಲಿ ಇದ್ದಾರೆ. ಅವರಲ್ಲಿ ಪುಣೆ ಮೂಲದ ಉದ್ಯಮಿ ಪೂಜಾ ಬಾದಾಮಿಕರ್ ಅವರು ಕೂಡ ಒಬ್ಬರು.
ವ್ಯರ್ಥ ಟಯರ್ಗಳನ್ನು ಬಳಸಿ ಅವರು ಅತೀ ಸುಂದರವಾದ ಚಪ್ಪಲಿಗಳನ್ನು ತಯಾರಿಸುತ್ತಿದ್ದಾರೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಅವರ ಉದ್ದೇಶವಾಗಿದೆ. “ವಿಶ್ವದಲ್ಲಿ ವಾರ್ಷಿಕವಾಗಿ ಒಂದು ಬಿಲಿಯನ್ ಟಯರ್ಗಳನ್ನು ಬಿಸಾಕಲಾಗುತ್ತದೆ. ನಾನು ಸ್ಥಳಿಯ ಚಮ್ಮಾರರ ಸಹಾಯವನ್ನು ಪಡೆದು ಈ ಟಯರ್ಗಳಿಂದ ಚಪ್ಪಲಿ ತಯಾರಿಸುವ ಪ್ರಯೋಗ ನಡೆಸಿದೆ. ಹೀಗೆ ಪ್ರಾರಂಭವಾದ ನಮ್ಮ ಪಯಣ ಇಂದು ಯಶಸ್ಸು ಕಾಣುತ್ತಿದೆ” ಎಂದು ಪೂಜಾ ಹೇಳುತ್ತಾರೆ.
ನವೀಕರಿಸಬಹುದಾದ ಶಕ್ತಿಯಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಪೂಜಾ ಬಾದಮಿಕರ್ ಅವರು ಕಳೆದ ಎರಡು ವರ್ಷಗಳಿಂದ ತನ್ನ ಪಾದರಕ್ಷೆಗಳ ಬ್ರಾಂಡ್ ನಿಮಿಟಲ್ ಮೂಲಕ ಬಿಸಾಕಿದ ಟಯರ್ಗಳನ್ನು ಪಾದರಕ್ಷೆಗಳನ್ನಾಗಿ ಪರಿವರ್ತಿಸುವ ಕೆಲಸ ಮಾಡುತ್ತಿದ್ದಾರೆ. ಈ ಟಯರ್ಗಳನ್ನು ಪಾದರಕ್ಷೆಗಳಾಗಿ ಮರುಬಳಕೆ ಮಾಡುವ ಮೂಲಕ ಮಾಲಿನ್ಯವನ್ನು ನಿಯಂತ್ರಿಸಲು ಆಕೆಗೆ ಸಾಧ್ಯವಾಗಿದೆ. ಸಾಮಾನ್ಯವಾಗಿ ಪಾದರಕ್ಷೆಗಳಲ್ಲಿ ಬಳಸುವ ಪ್ಲಾಸ್ಟಿಕ್ನಿಂದ ಪರಿಸರ ಹಾಳಾಗುತ್ತದೆ. ಅದನ್ನು ತಡೆಯಲು ಪೂಜಾ ಅವರು ನಡೆಸುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ.
“ವಿಶ್ವವ್ಯಾಪಿ ನಾವು ಪ್ರತಿವರ್ಷ ಸುಮಾರು 1 ಬಿಲಿಯನ್ ಸ್ಕ್ರ್ಯಾಪ್ಡ್ ಟಯರ್ಗಳನ್ನು ಉತ್ಪಾದಿಸುತ್ತೇವೆ. ಆದ್ದರಿಂದ, ಪ್ರತಿದಿನವೂ ಬಳಸಬಹುದಾದ ಟಯರ್ಗಳಿಂದ ಏನು ಮಾಡಬಹುದೆಂದು ನಾನು ಯೋಚಿಸಲು ಪ್ರಾರಂಭಿಸಿದೆ ಮತ್ತು ಕೊನೆಯಲ್ಲಿ ಪಾದರಕ್ಷೆಗಳನ್ನು ತಯಾರಿಸುವ ಚಿಂತನೆ ಬಂತು” ಎಂದು ಪೂಜಾ ಹೇಳುತ್ತಾರೆ.
ಬಾದಾಮಿಕರ್ ಅವರು 2018 ರಲ್ಲಿ ಸ್ವಂತ ಉದ್ಯಮವನ್ನು ಪ್ರಾರಂಭಿಸುವ ಸಲುವಾಗಿ ಐಟಿ ಕಂಪನಿಯೊಂದರಲ್ಲಿ ಕೆಲಸ ತೊರೆದರು ಮತ್ತು ಅದೇ ವರ್ಷ ಅವರಿಗೆ ಸ್ಟಾರ್ಟ್-ಅಪ್ ಇಂಡಿಯಾ ಸ್ಪರ್ಧೆಯಲ್ಲಿ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ನೀಡಲಾಯಿತು. ಟಯರ್ ಅನ್ನು ಪಾದರಕ್ಷೆಗಳಾಗಿ ಮರುಬಳಕೆ ಮಾಡುವ ಮೂಲಕ ಪರಿಸರವನ್ನು ಹಲವು ವಿಧಗಳಲ್ಲಿ ಉಳಿಸಬಹುದಾಗಿದೆ ಎಂದು ಬಾದಮಿಕರ್ ಹೇಳುತ್ತಾರೆ.
“ಸಾಂಪ್ರದಾಯಿಕವಾಗಿ ನಾವು ವರ್ಶನ್ ರಬ್ಬರ್ ಅಥವಾ ಪ್ಲಾಸ್ಟಿಕ್ ವಸ್ತುಗಳನ್ನು ಪಾದರಕ್ಷೆಗಳಿಗೆ ಬಳಸುತ್ತೇವೆ ಆದರೆ ನಾವು ಅದನ್ನು ಉನ್ನತ ಮಟ್ಟದ ಟಯರ್ನೊಂದಿಗ ಬದಲಾಯಿಸಿದ್ದೇವೆ ಮತ್ತು ಆ ಮೂಲಕ ನಾವು ಕಸಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿದ್ದೇವೆ, ಎರಡನೆಯದಾಗಿ ನಾವು ಪ್ಲಾಸ್ಟಿಕ್ನಂತಹ ವಸ್ತುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿದ್ದೇವೆ ಮತ್ತು ಮೂರನೆಯದಾಗಿ ತೈಲ ಮತ್ತು ನೀರಿನಂತಹ ಸಂಪನ್ಮೂಲಗಳ ಬಳಕೆಯನ್ನು ನಾವು ಕಡಿಮೆ ಮಾಡುತ್ತಿದ್ದೇವೆ, ಇಲ್ಲದಿದ್ದರೆ ಪ್ಲಾಸ್ಟಿಕ್ ಅಥವಾ ವರ್ಶನ್ ರಬ್ಬರ್ ತಯಾರಿಕೆಗೆ ಸಾಕಷ್ಟು ರಬ್ಬರ್ ಬೇಕಾಗುತ್ತದೆ “ಎಂದು ಬಾದಾಮಿಕರ್ ಹೇಳುತ್ತಾರೆ.
” ನಮ್ಮ ಸುತ್ತಲೂ ಕಸದ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿಯಾದ ಸನ್ನಿವೇಶ, ನಾವು ಅದನ್ನು ಕಡಿಮೆಗೊಳಿಸಬೇಕು. ಈ ನಿಟ್ಟಿನಲ್ಲಿ ಮರುಬಳಕೆ ಉತ್ತಮ ಮಾರ್ಗವಾಗಿದೆ” ಎಂದು ಅವರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.