ನವದೆಹಲಿ: ಫೈಜರ್ ಮತ್ತು ಬಯೋನ್ಟೆಕ್ ಅಭಿವೃದ್ಧಿಪಡಿಸಿರುವ ಕೊರೋನಾ ವೈರಸ್ ಲಸಿಕೆಯನ್ನು ಯುರೋಪಿಯನ್ ಯೂನಿಯನ್ (ಇಯು) ಅನುಮೋದಿಸಿದೆ. ಈ ವಾರದಲ್ಲೇ 27 ರಾಷ್ಟ್ರಗಳಲ್ಲಿ ಈ ಲಸಿಕೆ ಬಳಸಿ ಬೃಹತ್ ವ್ಯಾಕ್ಸಿನೇಷನ್ ಕಾರ್ಯಕ್ರಮದ ಮೊದಲ ಹಂತ ಪ್ರಾರಂಭವಾಗಲಿದೆ.
ಲಸಿಕೆ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತದೆ ಎಂದು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಹೇಳಿದ ಕೆಲವೇ ಗಂಟೆಗಳ ನಂತರ ಇಯು ಎಕ್ಸಿಕ್ಯೂಟಿವ್ ಕಮಿಷನ್ ಲಸಿಕೆ ಅಭಿಯಾನಕ್ಕೆ ಹಸಿರು ನಿಶಾನೆ ನೀಡಿದೆ.
ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು, ಎಲ್ಲಾ ಯುರೋಪಿಯನ್ ಯೂನಿಯನ್ ದೇಶಗಳಿಗೆ ಒಂದೇ ಸಮಯದಲ್ಲಿ ಮತ್ತು ಒಂದೇ ಸ್ಥಿತಿಗಳಲ್ಲಿ ಡೋಸೇಜ್ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಲಸಿಕೆಯ ಮೊದಲ ಬ್ಯಾಚ್ಗಳನ್ನು ಬೆಲ್ಜಿಯಂನ ಫೈಜರ್ ಉತ್ಪಾದನಾ ತಾಣದಿಂದ ರವಾನೆಯಾಗಲಿದೆ ಮತ್ತು ಲಸಿಕೆಗಳನ್ನು ಈ ತಿಂಗಳ 27 ರಿಂದ ಜನರಿಗೆ ನೀಡಲು ಪ್ರಾರಂಭಿಸಲಾಗುವುದು ಎಂದಿದ್ದಾರೆ.
ಜರ್ಮನಿ, ಫ್ರಾನ್ಸ್, ಆಸ್ಟ್ರಿಯಾ ಮತ್ತು ಇಟಲಿ ಸೇರಿದಂತೆ ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ಕ್ರಿಸ್ಮಸ್ ಹಬ್ಬದ ನಂತರ ಲಸಿಕೆ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಯೋಜಿಸುತ್ತಿರುವುದಾಗಿ ಹೇಳಿವೆ. ಯುರೋಪ್, ಯುಎಸ್ ಮತ್ತು ಬ್ರಿಟನ್ಗಳಲ್ಲಿ ಈ ತಿಂಗಳ ಆರಂಭದಲ್ಲಿ ಲಸಿಕ ಕಾರ್ಯಕ್ರಮ ಪ್ರಾರಂಭವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.