ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಲೀಜನ್ ಆಫ್ ಮೆರಿಟ್’ ಪದಕ ಪ್ರದಾನಿಸಿ ಗೌರವ ಸಲ್ಲಿಸಿದ್ದಾರೆ.
ಅಮೇರಿಕ-ಭಾರತ ಸಂಬಂಧ ಸುಧಾರಣೆ ಹಾಗೂ ಉಭಯ ರಾಷ್ಟ್ರಗಳ ರಕ್ಷಣಾ ಕಾರ್ಯ ನೀತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಿದ್ದಕ್ಕಾಗಿ ಈ ಗೌರವವನ್ನು ಮೋದಿಗೆ ಪ್ರದಾನಿಸಲಾಗಿದೆ.
ಪ್ರಧಾನಿ ಮೋದಿಯ ಪರವಾಗಿ ಅಮೆರಿಕಾದಲ್ಲಿನ ಭಾರತ ರಾಯಭಾರಿ ತರಣ್ಜೀತ್ ಸಿಂಗ್ ಅವರು ಪದಕ ಸ್ವೀಕರಿಸಿದರು.
ಅಮೆರಿಕದ ಸಶಸ್ತ್ರ ಪಡೆಯ ಮಿಲಿಟರಿ ಪುರಸ್ಕಾರವಾಗಿರುವ ‘ಲೀಜನ್ ಆಫ್ ಮೆರಿಟ್’ ಅತ್ಯುತ್ತಮ ಸೇವೆ ಮತ್ತು ಕಾರ್ಯಕ್ಷಮತೆಯಲ್ಲಿ ಪ್ರಶಂಸನೀಯ ನಡುವಳಿಕೆ ತೋರಿದವರಿಗೆ ನೀಡಿ ಗೌರವಿಸಲಾಗುತ್ತದೆ.
ಮೋದಿ ಮಾತ್ರವಲ್ಲದೇ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೂ ‘ಲೀಜನ್ ಆಫ್ ಮೆರಿಟ್’ ಪದಕ ನೀಡಿ ಗೌರವಿಸಲಾಗಿದ್ದು, ಆಯಾ ರಾಷ್ಟ್ರಗಳ ರಾಯಭಾರಿಗಳು ಪದಕವನ್ನು ಸ್ವೀಕರಿಸಿದ್ದಾರೆ.
“President @realDonaldTrump presented the Legion of Merit to Indian Prime Minister Narendra Modi for his leadership in elevating the U.S.-India strategic partnership. Ambassador @SandhuTaranjitS accepted the medal on behalf of Prime Minister Modi.” –NSA Robert C. O’Brien pic.twitter.com/QhOjTROdCC
— NSC (@WHNSC) December 21, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.