ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಬುಧವಾರ ಜೆಇಇ (ಮೇನ್ಸ್) ಪರೀಕ್ಷೆ -2021ಗೆ ಸಂಬಂಧಿಸಿದಂತೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ.
ಮುಂದಿನ ವರ್ಷ ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜೆಇಇ (ಮೇನ್ಸ್) ಪರೀಕ್ಷೆ -2021 ಅನ್ನು ನಾಲ್ಕು ಸೆಷನ್ಗಳಲ್ಲಿ ನಡೆಸಲಾಗುವುದು ಎಂದು ಅವರು ಘೋಷಿಸಿದ್ದಾರೆ. ಜೆಇಇ (ಮೇನ್ಸ್) 2021 ರ ಮೊದಲ ಸೆಷನ್ ಫೆಬ್ರವರಿ 23 ರಿಂದ 26 ರವರೆಗೆ ನಡೆಯಲಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ರ ಅನ್ವಯ, ಮೊದಲ ಬಾರಿಗೆ ಜೆಇಇ (ಮೇನ್ಸ್) ಪರೀಕ್ಷೆ -2021 ಅನ್ನು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. ಅದೆಂದರೆ ಅಸ್ಸಾಮಿ, ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು , ಉರ್ದು, ಹಿಂದಿ, ಇಂಗ್ಲಿಷ್ ಮತ್ತು ಗುಜರಾತಿ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಎಲ್ಲಾ ನಾಲ್ಕು ಸೆಷನ್ಗಳಿಗೂ ಅಭ್ಯರ್ಥಿಗಳು ಹಾಜರಾಗಬೇಕಾಗಿಲ್ಲ ಎಂದು ಸಚಿವರು ಮಾಹಿತಿ ನೀಡಿದರು. ಆದರೂ, ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಸೆಷನ್ಗಳಲ್ಲಿ ಕಾಣಿಸಿಕೊಂಡರೆ, ಆಗ ಅವರ ಅರ್ಹತಾ ಪಟ್ಟಿ / ಶ್ರೇಯಾಂಕವನ್ನು ತಯಾರಿಸಲು 2021 ಎನ್ಟಿಎ ಅಂಕಗಳಲ್ಲಿ ಅತ್ಯುತ್ತಮವಾದದ್ದನ್ನು ಪರಿಗಣಿಸಲಾಗುತ್ತದೆ. ಪ್ರಶ್ನೆ ಪತ್ರಿಕೆಯಲ್ಲಿ 90 ಪ್ರಶ್ನೆಗಳಿದ್ದು, ಅದರಲ್ಲಿ ಅಭ್ಯರ್ಥಿಯು ಒಟ್ಟು 75 ಪ್ರಶ್ನೆಗಳನ್ನು ಪ್ರಯತ್ನಿಸಬೇಕಾಗುತ್ತದೆ ಎಂದು ಸಚಿವರು ಘೋಷಿಸಿದ್ದಾರೆ.
ಜೆಇಇ (ಮೇನ್ಸ್) ಪರೀಕ್ಷೆ -2021 ಅನ್ನು ನಾಲ್ಕು ಸೆಷನ್ಗಳಲ್ಲಿ ನಡೆಸುವುದರಿಂದ ಅಭ್ಯರ್ಥಿಗಳು ಅತ್ಯುತ್ತಮ ಅಂಕಗಳನ್ನು ನೀಡಲು ಸಾಧ್ಯವಾಗದಿದ್ದರೆ ಪರೀಕ್ಷೆಯಲ್ಲಿ ತಮ್ಮ ಅಂಕಗಳನ್ನು ಸುಧಾರಿಸಲು ಅನೇಕ ಅವಕಾಶಗಳನ್ನು ಪಡೆಯುತ್ತಾರೆ ಎಂದು ಹೇಳಿದರು.
ಒಂದು ವೇಳೆ ಅಭ್ಯರ್ಥಿಯು ಪರೀಕ್ಷೆ ಸಂದರ್ಭ ಬೋರ್ಡ್ ಪರೀಕ್ಷೆಯನ್ನು ಹೊಂದಿದ್ದರೆ ಅಥವಾ ಕೋವಿಡ್-19 ಕಾರಣದಿಂದಾಗಿ ಹಾಜರಾಗಲು ಸಾಧ್ಯವಾಗದಿದ್ದರೆ, ಅಭ್ಯರ್ಥಿಯು ಜೆಇಇ (ಮೇನ್ಸ್) -2021 ತೆಗೆದುಕೊಳ್ಳಲು ಬೇರೆ ತಿಂಗಳು ಆಯ್ಕೆ ಮಾಡಬಹುದು ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.