ನವದೆಹಲಿ: ಬಿಜೆಪಿ ಅರುಣಾಚಲ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಅಭೂತಪೂರ್ವ ರೀತಿಯಲ್ಲಿ ಪ್ರಾರಂಭಿಸಿದೆ. ಅಲ್ಲಿ ಪಂಚಾಯತ್ ಮತ್ತು ಪುರಸಭೆ ಚುನಾವಣೆ ಡಿಸೆಂಬರ್ 22 ರಂದು ನಡೆಯಲಿದೆ.
ಆದರೆ, ಬಿಜೆಪಿ ಈಗಾಗಲೇ 8,291 ಗ್ರಾಮ ಪಂಚಾಯತ್ ಸದಸ್ಯ ಸ್ಥಾನಗಳಲ್ಲಿ 5,410 ಸ್ಥಾನಗಳನ್ನು , 240 ಜಿಲ್ಲಾ ಪರಿಷತ್ ಸದಸ್ಯ ಸ್ಥಾನಗಳಲ್ಲಿ 96 ಮತ್ತು ಇಟಾನಗರ ಮಹಾನಗರ ಪಾಲಿಕೆಯ 20 ಕಾರ್ಪೊರೇಟರ್ ಸ್ಥಾನಗಳಲ್ಲಿ 5 ಸ್ಥಾನಗಳಲ್ಲಿ ಅವಿರೋಧವಾಗಿ ಜಯಗಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಪೆಮಾ ಖಂಡು ಅವರು, “ರಾಜ್ಯದ ಪಂಚಾಯತ್ ಮತ್ತು ಪುರಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಅದ್ಭುತ ಆರಂಭ ಮಾಡಿದೆ. ಅವಿರೋಧವಾಗಿ ಗೆದ್ದ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಅರುಣಾಚಲದ ಜನರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಬಗ್ಗೆ ಅಚಲ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು” ಎಂದಿದ್ದಾರೆ.
An impressive start for @BJP4Arunachal in State’s Panchayat and Municipal polls 2020.
Congratulations to all the candidates from BJP who have won unopposed.
Also thanks to people of Arunachal for their unwavering trust in @BJP4India and PM @narendramodi Ji’s leadership. pic.twitter.com/Kjg4KTI1aT
— Pema Khandu པདྨ་མཁའ་འགྲོ་། (@PemaKhanduBJP) December 8, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.