ನವದೆಹಲಿ: ಕೋವಿಡ್ -19 ಲಸಿಕೆಯನ್ನು ಸಮರ್ಥವಾಗಿ ತಲುಪಿಸಲು ಭಾರತೀಯ ವಾಯುಪಡೆ 100 ಕ್ಕೂ ಹೆಚ್ಚು ವಿಮಾನ ಮತ್ತು ಹೆಲಿಕಾಪ್ಟರ್ಗಳನ್ನು ನಿಯೋಜಿಸಲಿದೆ ಎಂದು ಮೂಲಗಳು ವರದಿ ಮಾಡಿದೆ.
ವಾಯುಪಡೆಯು ಸಾರಿಗೆ ವಿಮಾನಗಳನ್ನು ಬಳಸಿ ಲಸಿಕೆಯನ್ನು ದೇಶದ ಮೂಲೆ ಮೂಲೆಗೂ ಪೂರೈಸುವ ಕಾರ್ಯವನ್ನು ವಾಯು ಯೋಧರು ಮಾಡಲಿದ್ದಾರೆ. ಕೊರೋನಾ ನಿರ್ಮೂಲನೆಗೆ ಲಸಿಕೆ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದ್ದು ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ಲಸಿಕೆಗಳನ್ನು ಸಾಗಿಸಲು ಸಿ -136 ಜೆ ಸೂಪರ್ ಹರ್ಕ್ಯುಲಸ್, ಐಎಲ್ -76 ಮತ್ತು ಕಾರ್ಗೋ ವಿಮಾನ ಸಿ -17 ಗ್ಲೋಬ್ಮಾಸ್ಟರ್ ಅನ್ನು ನಿಯೋಜಿಸಲಾಗುವುದು ಎಂದು ಮೂಲಗಳು ಉಲ್ಲೇಖಿಸಿವೆ.
ಇದಲ್ಲದೆ, ಚೀತಾ, ಚಿನೂಕ್, ಎಎಲ್ಎಚ್ ಮತ್ತು ಚೇತಕ್ ಹೆಲಿಕಾಪ್ಟರ್ಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲಿವೆ ಎನ್ನಲಾಗಿದೆ. ಸಣ್ಣ ಲಸಿಕೆ ಕೇಂದ್ರಗಳಲ್ಲಿ ಸೇವೆಗಾಗಿ ಡಾರ್ನಿಯರ್ ಮತ್ತು ವರ್ಕ್ಹಾರ್ಸ್ ಎಎನ್ -32 ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗುತ್ತದೆ.
ಒಂದೆರಡು ದಿನಗಳ ಹಿಂದೆ ನಡೆದ ಸರ್ವಪಕ್ಷ ಸಭೆಯಲ್ಲಿ ಕೋವಿಡ್ -19 ಲಸಿಕೆಯ ಮೊದಲ ಶಾಟ್ ಕೆಲವೇ ವಾರಗಳಲ್ಲಿ ಲಭ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.