ನವದೆಹಲಿ: ಎರಡು ವರ್ಷಗಳ ಅಂತರದ ನಂತರ ಚೀನಾ ಭಾರತೀಯ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಸ್ಪರ್ಧಾತ್ಮಕ ಬೆಲೆಗಳನ್ನು ನೀಡುತ್ತಿರುವುದರಿಂದ ಸುಮಾರು 5,000 ಟನ್ ಬಾಸ್ಮತಿ ಅಲ್ಲದ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಆದೇಶಿಸಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ತಿಳಿಸಿದೆ.
ಭಾರತವು ವಿಶ್ವದ ಪ್ರಮುಖ ಅಕ್ಕಿ ರಫ್ತುದಾರನಾಗಿದ್ದರೆ, ಚೀನಾ ಅತಿದೊಡ್ಡ ಆಮದುದಾರನಾಗಿದೆ. 2006 ರಲ್ಲಿ, ಚೀನಾಗೆ ಭಾರತೀಯ ಅಕ್ಕಿಗೆ ಮಾರುಕಟ್ಟೆ ಪ್ರವೇಶವನ್ನು ನೀಡಲಾಯಿತು. ಆದರೆ 2017-18ರ ಆರ್ಥಿಕ ಅವಧಿಯಲ್ಲಿ ಮಾತ್ರ ಅಲ್ಲಿಗೆ ಭಾರತದ ಅಕ್ಕಿಯ ಸಾಗಣೆ ನಡೆದಿತ್ತು.
ಇದೀಗ ಎರಡು ವರ್ಷಗಳ ನಂತರ ಭಾರತದಿಂದ ಅಕ್ಕಿ ಖರೀದಿಸಲು ಚೀನಾ ಮುಂದಾಗಿದೆ. ಉಭಯ ರಾಷ್ಟ್ರಗಳ ನಡುವಿನ ಗಡಿ ಉದ್ವಿಗ್ನತೆಯ ಸಮಯದಲ್ಲಿ ಈ ಬೆಳವಣಿಗೆ ನಡೆದಿರುವುದು ವಿಶೇಷ.
“2006 ರಲ್ಲಿ ಮಾರುಕಟ್ಟೆ ಪ್ರವೇಶವನ್ನು ನೀಡಲಾಗಿದ್ದರೂ, 2017-18ರ ಆರ್ಥಿಕ ವರ್ಷದಲ್ಲಿ ಚೀನಾ ಸುಮಾರು 974 ಟನ್ ಬಾಸ್ಮತಿ ಅಲ್ಲದ ಅಕ್ಕಿಯನ್ನು ಆಮದು ಮಾಡಿಕೊಂಡಿತ್ತು. ಈಗ ಎರಡು ವರ್ಷಗಳ ನಂತರ ನಾವು ಆ ದೇಶದಿಂದ ಆರ್ಡರ್ ಸ್ವೀಕರಿಸಲು ಪ್ರಾರಂಭಿಸಿದ್ದೇವೆ” ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ವಿನೋದ್ ಕೌಲ್ ತಿಳಿಸಿದ್ದಾರೆ.
2020-21ರ ಆರ್ಥಿಕ ವರ್ಷದ ಅಕ್ಟೋಬರ್ ವರೆಗೆ 150 ಟನ್ಗಿಂತ ಕಡಿಮೆ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡಲಾಗಿದೆ. ಕಳೆದ ಎರಡು ತಿಂಗಳಲ್ಲಿ, ಚೀನಾ ದಕ್ಷಿಣ ಭಾರತದಿಂದ ಬ್ರೋಕನ್ ರೈಸ್ ಎಂದು ಕರೆಯಲ್ಪಡುವ ಸುಮಾರು 5,000 ಟನ್ ಬಾಸ್ಮತಿ ಅಲ್ಲದ ಅಕ್ಕಿಯನ್ನು ಚೀನಾ ಆಮದು ಮಾಡಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಬ್ರೋಕನ್ ರೈಸ್ ಅನ್ನು ನೂಡಲ್ಸ್ ತಯಾರಿಸಲು ಮತ್ತು ವೈನ್ ಉದ್ಯಮದಲ್ಲಿ ಬಳಸಲಾಗುತ್ತದೆ.
ಭಾರತದಿಂದ ಅಕ್ಕಿ ಖರೀದಿಸಲು ಚೀನಾ ಆಸಕ್ತಿ ತೋರಿಸಲು ಪ್ರಾರಂಭಿಸಿದೆ, ಪ್ರಸ್ತುತ ಅದು ಅಕ್ಕಿ ಪೂರೈಕೆಯಲ್ಲಿ ಬಿಕ್ಕಟ್ಟು ಎದುರಿಸುತ್ತಿರುವುದು ಇದಕ್ಕೆ ಕಾರಣ ಎಂದು ಕೌಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.