ಬೆಂಗಳೂರು: ನೈಋತ್ಯ ರೈಲ್ವೆಯ 26 ವಿಶೇಷ ರೈಲುಗಳ ಪಟ್ಟಿಗೆ ರೈಲ್ವೆ ಮಂಡಳಿಯ ಅನುಮೋದನೆ ದೊರೆತಿದೆ.
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ರೈಲು ಪ್ರಯಾಣದ ಹಿನ್ನೆಲೆಯಲ್ಲಿ ಈ ಅನುಮೋದನೆ ಮಹತ್ವ ಪಡೆದಿದ್ದು, ಶೀಘ್ರದಲ್ಲೇ ಆರು ಜೋಡಿ ಉಪನಗರ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ಕಾರ್ಯಯೋಜನೆಯನ್ನು ಹಾಕಿಕೊಂಡಿದೆ. ವಾರದಲ್ಲಿ ಆರು ದಿನಗಳ ಕಾಲ ಈ ರೈಲುಗಳು ಓಡಾಟ ನಡೆಸಲಿರುವುದಾಗಿಯೂ ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.
ಯಶವಂತಪುರ-ಹೊಸೂರು-ಯಶವಂತಪುರ ಮೆಮು ಎಕ್ಸ್ಪ್ರೆಸ್ ರೈಲು (06547/06548), ಯಶವಂತಪುರ-ತುಮಕೂರು-ಯಶವಂತಪುರ ಡೆಮು ಎಕ್ಸ್ಪ್ರೆಸ್ (06553/06554), ಬೆಂಗಳೂರು ನಗರ-ಮಾರಿಕುಪ್ಪಂ-ಬೆಂಗಳೂರು ನಗರ ಮೆಮು ವಿಶೇಷ (06555/06556), ಬಂಗಾರ ಪೇಟೆ-ಮೈಸೂರು-ಬಂಗಾರಪೇಟೆ ಮೆಮು ಎಕ್ಸ್ಪ್ರೆಸ್ (06557/06558), ಹಿಂದೂಪುರ-ಯಶವಂತಪುರ- ಹಿಂದೂಪುರ (06563/06564) ಹಾಗೂ ಯಶವಂತಪುರ-ಹಾಸನ- ಯಶವಂತಪುರ ಡೆಮು ಎಕ್ಸ್ಪ್ರೆಸ್ (06579/06580) ರೈಲುಗಳು ಓಡಾಟ ಆರಂಭಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ, ತಾಳಗುಪ್ಪ, ಯಶವಂತಪುರ ಮತ್ತು ಹಾಸನ, ಕೆಎಸ್ಆರ್ ಬೆಂಗಳೂರು, ಧಾರವಾಡ ನಡುವಿನ ಮೂರು ಅಂತರ್ ನಗರ (ಇಂಟರ್ಸಿಟಿ) ವಿಶೇಷ ಜೋಡಿ ರೈಲುಗಳನ್ನು ಪ್ರತಿನಿತ್ಯ ಓಡಿಸಲಾಗುವುದು. ಬೆಂಗಳೂರು-ಮಂಗಳೂರು ಸೆಂಟ್ರಲ್ ವಾರದಲ್ಲಿ ನಾಲ್ಕು ದಿನ ಸೇವೆ ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.