ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ತಪ್ಪು ನಕ್ಷೆಯನ್ನು ತೋರಿಸಿರುವ ಲಿಂಕ್ ಅನ್ನು ವಿಕಿಪೀಡಿಯಾ ಪ್ಲಾಟ್ಫಾರ್ಮ್ನಿಂದ ತೆಗೆದುಹಾಕುವಂತೆ ವಿಕಿಪೀಡಿಯಾಗೆ ಕೇಂದ್ರವು ಆದೇಶ ಹೊರಡಿಸಿದೆ.
ಭಾರತದ ತಪ್ಪಾದ ನಕ್ಷೆಯನ್ನು ತೋರಿಸಿದ್ದಕ್ಕಾಗಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69 ಎ ಅಡಿಯಲ್ಲಿ ಆದೇಶ ಹೊರಡಿಸಿದೆ.
ಈ ಲಿಂಕ್ ಬಗ್ಗೆ ಟ್ವಿಟ್ಟರ್ ಬಳಕೆದಾರರು ಟ್ವೀಟ್ ಮೂಲಕ ಫ್ಲ್ಯಾಗ್ ಮಾಡಿ ಸರ್ಕಾರಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಭಾರತ ಭೂತಾನ್ ಸಂಬಂಧದ ಬಗೆಗಿನ ವಿಕಿಪೀಡಿಯಾ ಪುಟವನ್ನು ಬಳಕೆದಾರರು ಹೈಲೈಟ್ ಮಾಡಿದ್ದು, ಅಲ್ಲಿ ಜಮ್ಮು-ಕಾಶ್ಮೀರದ ನಕ್ಷೆಯನ್ನು ತಪ್ಪಾಗಿ ಚಿತ್ರಿಸಲಾಗಿದೆ.
ಇದನ್ನು ಅರಿತುಕೊಂಡು, ನವೆಂಬರ್ 27 ರಂದು ಸರ್ಕಾರವು ಈ ಪುಟವನ್ನು ತೆಗೆದುಹಾಕುವಂತೆ ವಿಕಿಪೀಡಿಯಾಗೆ ನಿರ್ದೇಶನ ನೀಡಿತ್ತು ಮತ್ತು ಇದು ಪ್ರಾದೇಶಿಕ ಸಮಗ್ರತೆ ಮತ್ತು ಭಾರತದ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು.
ವಿಕಿಪೀಡಿಯಾ ಈ ನಿರ್ದೇಶನವನ್ನು ಅನುಸರಿಸದಿದ್ದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69 ಎ ಪ್ರಕಾರ ಇಡೀ ವಿಕಿಪೀಡಿಯಾ ಪ್ಲಾಟ್ಫಾರ್ಮ್ಗೆ ಪ್ರವೇಶವನ್ನು ನಿರ್ಬಂಧಿಸುವುದು ಸೇರಿದಂತೆ ವಿಕಿಪೀಡಿಯಾದ ವಿರುದ್ಧ ಸರ್ಕಾರ ಗಂಭೀರ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.
ಇಲ್ಲಿಯವರೆಗೆ, ವಿಕಿಪೀಡಿಯಾ ನಕ್ಷೆಯನ್ನು ಸರಿಪಡಿಸಲಾಗಿಲ್ಲ .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.