ನವದೆಹಲಿ: ಆಫ್ರಿಕಾ ದೇಶಗಳೊಡನೆ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಭಾರತ, ಆಫ್ರಿಕಾದ ಅತಿದೊಡ್ಡ ಹೂಡಿಕೆಯ ದೇಶವಾಗುವತ್ತ ಹೆಜ್ಜೆ ಇರಿಸಿದೆ.
ಟಿಇಸಿಪಿ ಆಯೋಜಿಸಿದ್ದ ವರ್ಚುವಲ್ ಇಂಡಿಯಾ ಆಫ್ರಿಕಾ ಐಸಿಟಿ ಎಕ್ಸ್ಪೋ -2020 ರಲ್ಲಿ ಮಾತನಾಡಿದ ದೂರಸಂಪರ್ಕ ಕಾರ್ಯದರ್ಶಿ ಅನ್ಸು ಪ್ರಕಾಶ್ ಅವರು ಈ ಸಂಬಂಧ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಭಾರತ, ಆಫ್ರಿಕಾದಲ್ಲಿ ಐದನೇ ಅತೀ ದೊಡ್ಡ ಹೂಡಿಕೆ ರಾಷ್ಟ್ರವಾಗಿದೆ. ಆಫ್ರಿಕಾ ದೇಶಗಳು ಸುರಕ್ಷಿತ ಐಸಿಟಿ ಉತ್ಪನ್ನಗಳಿಗಾಗಿ ಎದುರು ನೋಡುತ್ತಿದ್ದರೆ ಭಾರತವನ್ನು ಅವಲಂಬಿಸುವಂತೆಯೂ ಅವರು ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಿದ್ದಾರೆ. ಭಾರತವು ವಾಣಿಜ್ಯ ವ್ಯವಹಾರ, ಪರಸ್ಪರ ಸಂಬಂಧಗಳ ಮೇಲೆ ಹೆಚ್ಚು ವಿಶ್ವಾಸ ಹೊಂದಿರುವುದಾಗಿಯೂ ಅನ್ಸು ಪ್ರಕಾಶ್ ಹೇಳಿದ್ದಾರೆ.
ಭಾರತದ ಸಂಸ್ಥೆಗಳು ಎಂಜಿನಿಯರಿಂಗ್ ಸಾಮರ್ಥ್ಯ ಮತ್ತು ಸ್ಮಾರ್ಟ್ ಆವಿಷ್ಕಾರಗಳೊಂದಿಗೆ ಸಂಶೋಧನೆಯನ್ನು ಮಾಡುತ್ತಿವೆ. ಅದರೊಂದಿಗೆ ಭಾರತೀಯ ಪ್ರತಿಭಾವಂತರಿಂದ ನೌಕರರಿಗೆ ಮಾಪಕಗಳಲ್ಲಿ ತರಬೇತಿಯನ್ನು ಸಹ ನೀಡಲಾಗುತ್ತಿದೆ. ನೂತನ ವಿನ್ಯಾಸ, ಮಾದರಿಗಳನ್ನು, ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಭಾರತ ಹೆಚ್ಚು ಆಸಕ್ತಿ ವಹಿಸುತ್ತಿರುವುದಾಗಿ ಇದೇ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.