ಕೊಚ್ಚಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ, ಭಾರತೀಯ ನೌಕಾಪಡೆಯ ಮುಂಬರುವ ಸ್ಥಳೀಯ ವಿಮಾನವಾಹಕ ನೌಕೆಯು ಬೇಸಿನ್ (ಜಲಾನಯನ) ಪ್ರಯೋಗಗಳನ್ನು ಸೋಮವಾರ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (ಸಿಎಸ್ಎಲ್) ನಲ್ಲಿ ಯಶಸ್ವಿಯಾಗಿ ನಡೆಸಲಾಯಿತು ಎಂದು ಮೂಲಗಳು ವರದಿ ಮಾಡಿದೆ.
ದಕ್ಷಿಣದ ನೌಕಾಪಡೆಯ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಎ. ಕೆ. ಚಾವ್ಲಾ ಮತ್ತು ಸಿಎಸ್ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಧು ಎಸ್. ನಾಯರ್ ಅವರ ಸಮ್ಮುಖದಲ್ಲಿ ಬೇಸಿನ್ (ಜಲಾನಯನ) ಪ್ರಯೋಗಗಳನ್ನು ನಡೆಸಲಾಯಿತು.
“ಮಹತ್ವಾಕಾಂಕ್ಷೆಯ ಯುದ್ಧನೌಕೆ ನಿರ್ಮಾಣ ಯೋಜನೆಯ ಅಂತಿಮ ಹಂತಕ್ಕೆ ಪ್ರವೇಶವನ್ನು ಗುರುತಿಸಲು, ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (ಸಿಎಸ್ಎಲ್) ನಲ್ಲಿ ಸೋಮವಾರ ಬೇಸಿನ್ ಟ್ರಯಲ್ಸ್ ಆಫ್ ಇಂಡಿಜೀನಸ್ ಏರ್ಕ್ರಾಫ್ಟ್ ಕ್ಯಾರಿಯರ್ (ಐಎಸಿ) ಅನ್ನು ಯಶಸ್ವಿಯಾಗಿ ನಡೆಸಲಾಯಿತು. ಬೇಸಿನ್ ಟ್ರಯಲ್ ಸಮುದ್ರ ಪ್ರಯೋಗಗಳಿಗೂ ಮೊದಲು ತೇಲುವ ಪರಿಸ್ಥಿತಿಗಳಲ್ಲಿ ಹಡಗು ಯಂತ್ರೋಪಕರಣಗಳು ಮತ್ತು ಉಪಕರಣಗಳನ್ನು ಪರೀಕ್ಷಿಸುತ್ತದೆ. ಬೇಸಿನ್ ಟ್ರಯಲ್ಸ್ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಐಎಸಿ ಯೋಜನೆಯ ಅಂತಿಮ ಹಂತವನ್ನು ಪ್ರವೇಶಿಸಿದೆ” ಎಂದು ರಕ್ಷಣಾ ಹೇಳಿಕೆ ತಿಳಿಸಿದೆ.
ಸಮುದ್ರ ಪ್ರಯೋಗಗಳನ್ನು 2021 ರ ಮೊದಲಾರ್ಧದಲ್ಲಿ ನಡೆಸಲು ಯೋಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.