ನವದೆಹಲಿ: ಮಹಾಮಾರಿ ಕೊರೋನಾ ಸೋಂಕಿಗೆ ಲಸಿಕೆ ಕಂಡುಹಿಡಿಯಲು ಪ್ರಯತ್ನ ನಡೆಸುತ್ತಿರುವ ಮೂರು ತಂಡಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.
ಕೊರೋನಾ ಲಸಿಕೆ ಅಭಿವೃದ್ಧಿ ಮತ್ತು ಅವುಗಳ ತಯಾರಿಗೆ ಸಂಬಂಧಿಸಿದಂತೆ ಮೋದಿ ಅವರು ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡರು. ಅದರೊಂದಿಗೆ ಕೊರೋನಾ ನಿಯಂತ್ರಣ, ಲಸಿಕೆ ತಯಾರಿಕೆಗೆ ಸಂಬಂಧಿಸಿದಂತೆ ಅಗತ್ಯ ಸಲಹೆ ಸೂಚನೆಗಳನ್ನು, ಉಪಾಯಗಳನ್ನು ನೀಡುವಂತೆಯೂ ಲಸಿಕೆ ತಯಾರಿಕಾ ಸಂಸ್ಥೆಗಳಿಗೆ ಮನವಿ ಮಾಡಿದರು.
ಲಸಿಕೆ ತಯಾರಿಕಾ ತಂಡಗಳಾದ ಜೆನೆವೋ ಬಯೋಫಾರ್ಮಾ, ಬಯಾಲಾಜಿಕಲ್ ಇ ಮತ್ತು ಡಾ. ರೆಡ್ಡಿ ತಂಡಗಳ ಜೊತೆಗೆ ಅವರು ಸಂವಾದ ನಡೆಸಿದರು.
ಜೊತೆಗೆ ಕೊರೋನಾ ಲಸಿಕೆ ಬಳಕೆ ಮತ್ತು ಅದಕ್ಕೆ ಸಂಬಂಧಿಸಿದ ಪೂರಕ ಅಗತ್ಯ ಮಾಹಿತಿಗಳನ್ನು ಜನಸಾಮಾನ್ಯರಿಗೆ ಅರಿವಾಗುವಂತೆ ಸುಲಭ ಮತ್ತು ಸರಳವಾಗಿ ತಿಳಿಸಿಕೊಡುವಂತೆಯೂ ಮೋದಿ ಅವರು ಲಸಿಕೆ ತಯಾರಿಕಾ ಸಂಸ್ಥೆಗಳ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆ ಮೂಲಕ ಕೊರೋನಾ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಲು ಅವರು ಕರೆ ನೀಡಿದ್ದಾರೆ.
Prime Minister @narendramodi interacts with three teams working on developing & manufacturing #COVID19 vaccine
PM asks the companies to come out with their suggestions and ideas regarding the regulatory processes and related matters
(1/2)https://t.co/Fp6B26o46e pic.twitter.com/aLsu7R4Lwv
— PIB India (@PIB_India) November 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.