ನವದೆಹಲಿ: ಕಾರ್ತಿಕ ಪೂರ್ಣಿಮೆಯ ದಿನವಾದ ಇಂದು ಸಿಖ್ಖ್ ಧರ್ಮದ ಸಂಸ್ಥಾಪಕ ಗುರುನಾನಕ್ರ ಜನ್ಮದಿನ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಸಿಖ್ಖ್ರ ಧರ್ಮಗುರುವಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಗುರುನಾನಕ್ರ ಜೀವನಾದರ್ಶಗಳನ್ನು ಇದೇ ಸಂದರ್ಭದಲ್ಲಿ ಸ್ಮರಿಸಿರುವ ನರೇಂದ್ರ ಮೋದಿ ಅವರು, ಜಗತ್ತಿನ ಒಳಿತಿಗೆ, ಶ್ರೇಯಸ್ಸಿಗೆ ಶ್ರೀ ಗುರುನಾನಕ್ರ ಚಿಂತನೆಗಳು ಮಾರ್ಗದರ್ಶನವಾಗಲಿ. ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸಿಖ್ಖ್ರ ಮೊದಲ ಧರ್ಮಗುರು ಗುರುನಾನಕ್ ದೇವರು 1469 ನೇ ಇಸವಿಯಲ್ಲಿ ಈಗಿನ ಪಾಕಿಸ್ಥಾನದ ನಾನ್ಕನಾದಲ್ಲಿ ಹುಟ್ಟಿದ್ದರು. ಅವರ ಗೌರವಾರ್ಥ ಪ್ರಧಾನಿ ಮೋದಿ ಅವರು ಗುರುನಾನಕ್ ಅವರ ಜೀವನಾದರ್ಶಗಳನ್ನು ನೆನಪಿಸಿಕೊಳ್ಳುವ ಮೂಲಕ ನಮನ ಸಲ್ಲಿಸಿದ್ದಾರೆ.
I bow to Sri Guru Nanak Dev Ji on his Parkash Purab. May his thoughts keep motivating us to serve society and ensure a better planet.
— Narendra Modi (@narendramodi) November 30, 2020
ಇನ್ನು ಗುರುನಾನಕ್ರ ಜಯಂತಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೂ ಗೌರವ ಸಲ್ಲಿಸಿದ್ದು, ಏಕತೆ, ಭ್ರಾತೃತ್ವ, ಸಾಮರಸ್ಯ, ಸೌಹಾರ್ದತೆ, ಸೇವೆಯ ಮೂಲಕ ದಾರಿ ತೋರಿದವರು ಗುರುನಾನಕ್ರು. ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಸ್ವಾಭಿಮಾನದ ಆಧಾರದಲ್ಲಿಯೂ ಜೀವನ ರೂಪಿಸಿಕೊಳ್ಳಲು ಆರ್ಥಿಕ ತತ್ವಶಾಸ್ತ್ರವನ್ನು ಬೋಧಿಸಿದ್ದವರು ಎಂದು ಟ್ವೀಟ್ ಮಾಡಿದ್ದಾರೆ.
गुरु नानक देव की जयंती के शुभ अवसर पर, मैं सभी देशवासियों और विदेश में बसे सभी भारतीयों, विशेष रूप से सिख समुदाय के भाइयों और बहनों को हार्दिक बधाई और शुभकामनाएं देता हूं। आइए, इस पावन अवसर पर, हम सब अपने आचरण में उनकी शिक्षाओं का पालन करें।
— President of India (@rashtrapatibhvn) November 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.