ಲಡಾಖ್: ಚೀನಾದೊಂದಿಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ, ಭಾರತೀಯ ನೌಕಾಪಡೆ ತನ್ನ ಮರೈನ್ ಕಮಾಂಡೋಗಳನ್ನು (MARCOS) ಪೂರ್ವ ಲಡಾಖ್ನ ಪಾಂಗೊಂಗ್ ಸರೋವರ ಪ್ರದೇಶದಲ್ಲಿ ನಿಯೋಜಿಸಿದೆ.
ಈ ಪ್ರದೇಶದಲ್ಲಿ ಸಂಘರ್ಷ ಆರಂಭವಾದ ದಿನದಿಂದಲೇ ಭಾರತೀಯ ವಾಯುಪಡೆಯ ಗರುಡ ಕಾರ್ಯಾಚರಣಾ ಪಡೆ ಮತ್ತು ಭಾರತೀಯ ಸೇನೆಯ ಪ್ಯಾರಾ ವಿಶೇಷ ಪಡೆಗಳು ನಿಯೋಜಿತಗೊಂಡಿವೆ. ಇದೀಗ ಅಲ್ಲಿ ಮರೈನ್ ಕಮಾಂಡೋಗಳು ನಿಯೋಜನೆಗೊಳಿಸಲಾಗಿದೆ.
ಮೂರು ಸೇವೆಗಳ ಏಕೀಕರಣವನ್ನು ಹೆಚ್ಚಿಸುವುದು ಮತ್ತು ನೌಕಾ ಕಮಾಂಡೋಗಳಿಗೆ ತೀವ್ರ ಶೀತ ಹವಾಮಾನ ಪರಿಸ್ಥಿತಿಗಳಿಗೆ ಒಡ್ಡಿಕೊಳ್ಳುವುದನ್ನು ಅಭ್ಯಾಸ ಮಾಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ.
“ಈ ವರ್ಷದ ಏಪ್ರಿಲ್-ಮೇ ಕಾಲಮಿತಿಯಿಂದಲೇ ಭಾರತೀಯ ಮತ್ತು ಚೀನಾದ ಪಡೆಗಳು ಸಂಘರ್ಷದಲ್ಲಿ ತೊಡಗಿರುವ ಪಾಂಗೊಂಗ್ ಸರೋವರ ಪ್ರದೇಶದಲ್ಲಿ ಮಾರ್ಕೋಸ್ ಕಮಾಂಡೋಗಳನ್ನು ನಿಯೋಜಿಸಲಾಗಿದೆ” ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈ ನಡುವೆ, ನೌಕಾಪಡೆಯ ಕಮಾಂಡೋಗಳು ಶೀಘ್ರದಲ್ಲೇ ಸರೋವರ ಕಾರ್ಯಾಚರಣೆಗಾಗಿ ಹೊಸ ದೋಣಿಗಳನ್ನು ಮತ್ತು ಸರೋವರದ ಕಾರ್ಯಾಚರಣೆಗೆ ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಪಡೆಯಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.