
ಕೊಲಂಬೊ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮಾಲ್ಡೀವ್ಸ್ ರಕ್ಷಣಾ ಸಚಿವೆ ಮರಿಯಾ ದೀದಿ ಅವರನ್ನು ಭೇಟಿ ಮಾಡಿ ಹಿಂದೂ ಮಹಾಸಾಗರದ ಪ್ರಮುಖ ದ್ವೀಪ ರಾಷ್ಟ್ರದೊಂದಿಗೆ ದ್ವಿಪಕ್ಷೀಯ ಸಹಭಾಗಿತ್ವವನ್ನು ಗಾಢವಾಗಿಸುವ ಬಗ್ಗೆ ಸೌಹಾರ್ದಯುತ ಮತ್ತು ವಿಸ್ತೃತ ಚರ್ಚೆ ನಡೆಸಿದ್ದಾರೆ.
ದಿದಿ ಅವರೊಂದಿಗಿನ ದೋವಲ್ ಅವರ ಮಾತುಕತೆ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ನಡುವೆ ಶ್ರೀಲಂಕಾದ ರಾಜಧಾನಿಯಲ್ಲಿ ನಡೆಯುತ್ತಿರುವ ತ್ರಿಪಕ್ಷೀಯ ಕಡಲ ಸಂವಾದದ ಭಾಗವಾಗಿತ್ತು.
ಭಾರತ ಮತ್ತು ಮಾಲ್ಡೀವ್ಸ್ನೊಂದಿಗಿನ ಸಮುದ್ರ ಭದ್ರತಾ ಸಹಕಾರದ ಕುರಿತ ನಾಲ್ಕನೇ ರಾಷ್ಟ್ರೀಯ ಭದ್ರತಾ ಸಲಹೆಗಾರರ ತ್ರಿಪಕ್ಷೀಯ ಸಭೆಯನ್ನು ಶ್ರೀಲಂಕಾ ಆಯೋಜಿಸುತ್ತಿದೆ.
ಈ ಸಭೆ ಆರು ವರ್ಷಗಳ ನಂತರ ನಡೆಯುತ್ತಿದೆ. ಕೊನೆಯ ಸಭೆ 2014 ರಲ್ಲಿ ನವದೆಹಲಿಯಲ್ಲಿ ನಡೆದಿತ್ತು.
“ಎನ್ಎಸ್ಎ ಅಜಿತ್ ದೋವಲ್ ಮತ್ತು ಮಾಲ್ಡೀವ್ಸ್ ರಕ್ಷಣಾ ಸಚಿವ ಮರಿಯಾ ದಿದಿ, ಭಾರತ ಮತ್ತು ಮಾಲ್ಡೀವ್ಸ್ ನಡುವೆ ರಕ್ಷಣಾ ಮತ್ತು ಸುರಕ್ಷತೆಯಲ್ಲಿ ದ್ವಿಪಕ್ಷೀಯ ಸಹಭಾಗಿತ್ವವನ್ನು ಗಾಢವಾಗಿಸುವ ಬಗ್ಗೆ ಸೌಹಾರ್ದಯುತ ಮತ್ತು ವಿವರವಾದ ಚರ್ಚೆಯನ್ನು ನಡೆಸಿದರು” ಎಂದು ಮಾಲ್ಡೀವ್ಸ್ನಲ್ಲಿನ ಭಾರತದ ಹೈ ಕಮಿಷನ್ ಟ್ವೀಟಿನಲ್ಲಿ ತಿಳಿಸಿದೆ.
ತ್ರಿಪಕ್ಷೀಯ ಕಡಲ ಸಂವಾದಕ್ಕಾಗಿ ದೋವಲ್ ಶುಕ್ರವಾರ ಕೊಲಂಬೊಗೆ ಆಗಮಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


