ನವದೆಹಲಿ: ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ವಿಶ್ವದಲ್ಲೇ 4 ನೇ ಅತೀ ದೊಡ್ಡದಾಗಿದೆ ಮತ್ತು ಇದು ಎಲ್ಲಾ ಪ್ರಮುಖ ದೇಶಗಳಿಗಿಂತಲೂ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಿನ್ನೆ ಸಂಜೆ ವರ್ಚುವಲ್ ರೂಪದ ಆರ್ಇ-ಇನ್ವೆಸ್ಟ್ 2020 ರ 3 ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆ ಸಭೆ ಮತ್ತು ಎಕ್ಸ್ಪೋವನ್ನು ಉದ್ಘಾಟಿಸಿದ ಮೋದಿ, ಭಾರತದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ಪ್ರಸ್ತುತ 136 ಗಿಗಾ ವಾಟ್ಸ್ ಆಗಿದೆ, ಇದು ದೇಶದ ಒಟ್ಟು ಸಾಮರ್ಥ್ಯದ ಶೇಕಡಾ 36 ರಷ್ಟಿದೆ ಎಂದು ಅವರು ಹೇಳಿದರು.
ಕಳೆದ 6 ವರ್ಷಗಳಲ್ಲಿ ಭಾರತವು ಸರಿಸಾಟಿಯಿಲ್ಲದ ರೀತಿಯಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಪ್ರಯಾಣ ನಡೆಸಿದೆ. ಪ್ರತಿಯೊಬ್ಬ ನಾಗರಿಕನು ಇದರ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ದೇಶವು ಉತ್ಪಾದನಾ ಸಾಮರ್ಥ್ಯ ಮತ್ತು ಜಾಲವನ್ನು ವಿಸ್ತರಿಸುತ್ತಿದೆ ಎಂದು ಅವರು ಹೇಳಿದರು.
ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ವಾರ್ಷಿಕ ಸೇರ್ಪಡೆಯು 2017 ರಿಂದ ಕಲ್ಲಿದ್ದಲು ಆಧಾರಿತ ಥರ್ಮಲ್ ಪವರ್ ಅನ್ನು ಮೀರಿದೆ ಎಂದು ಪ್ರಧಾನಿ ಹೇಳಿದರು. ಕಳೆದ 6 ವರ್ಷಗಳಲ್ಲಿ ಭಾರತವು ಸ್ಥಾಪಿಸಬಹುದಾದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಎರಡೂವರೆ ಪಟ್ಟು ಹೆಚ್ಚಿಸಿದೆ. ಇದು ಕೈಗೆಟುಕದಂತಿದ್ದ ಸಂದರ್ಭದಲ್ಲೂ, ಭಾರತವು ನವೀಕರಿಸಬಹುದಾದ ಇಂಧನಕ್ಕಾಗಿ ಹೂಡಿಕೆ ಮಾಡಿದೆ ಮತ್ತು ಇದು ವೆಚ್ಚವನ್ನು ತಗ್ಗಿಸುತ್ತಿದೆ ಎಂದು ಅವರು ಹೇಳಿದರು. ಉತ್ತಮ ಪರಿಸರ ನೀತಿಗಳು ಸಹ ಉತ್ತಮ ಆರ್ಥಿಕತೆ ಆಗಬಹುದು ಎಂದು ಭಾರತವು ಜಗತ್ತಿಗೆ ತೋರಿಸುತ್ತಿದೆ ಎಂದು ಪ್ರಧಾನಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.