ಕೇವಾಡಿಯ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಸಂವಿಧಾನ ದಿನದಂದು ಭಾರತೀಯ ಸಂವಿಧಾನದ ಪ್ರಿಯಾಂಬಲ್ ಅನ್ನು ಓದಿದರು. ಪ್ರತಿ ವರ್ಷ ನವೆಂಬರ್ 26ರಂದು ದೇಶವು ಸಂವಿಧಾನ ದಿನವನ್ನು ಆಚರಿಸುತ್ತದೆ. 2015 ರಿಂದ ದಿನಾಚರಣೆ ಪ್ರಾರಂಭಿಸಲಾಯಿತು.
ಭಾರತದ ಸಂವಿಧಾನವನ್ನು 26 ನವೆಂಬರ್ 1949 ರಂದು ಅಂಗೀಕರಿಸಲಾಯಿತು. ನಂತರ ಇದು ಜನವರಿ 26, 1950ರಂದು ಜಾರಿಗೆ ಬಂದಿತು. ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಬಾಬಾಸಾಹೇಬ್ ಡಾ. ಭೀಮ್ ರಾವ್ ಅಂಬೇಡ್ಕರ್ ಅವರನ್ನು ಭಾರತ ಸಂವಿಧಾನದ ಶಿಲ್ಪಿ ಎಂದು ಕರೆಯಲಾಗುತ್ತದೆ.
ಭಾರತದ ಸಂವಿಧಾನದ ಆಶಯಗಳನ್ನು ಉಳಿಸಲು ನವೆಂಬರ್ 26 ಅನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತದೆ. 2015 ರಲ್ಲಿ, 2015 ರ ನವೆಂಬರ್ 19 ರಂದು ಹೊರಡಿಸಲಾದ ಗೆಜೆಟ್ ಅಧಿಸೂಚನೆಯು ನವೆಂಬರ್ 26 ಅನ್ನು ‘ಸಂವಿಧಾನ ದಿನ’ ಎಂದು ಘೋಷಿಸಿತು. ಅಲ್ಲದೆ, 1979 ರಲ್ಲಿ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ನ ನಿರ್ಣಯದಂತೆ, ಈ ದಿನವನ್ನು ‘ರಾಷ್ಟ್ರೀಯ ಕಾನೂನು ದಿನ’ ಎಂದೂ ಆಚರಿಸಲಾಗುತ್ತದೆ.
#WATCH संविधान दिवस के अवसर पर राष्ट्रपति रामनाथ कोविंद ने भारत के संविधान की प्रस्तावना पढ़ी। pic.twitter.com/vOC2oSJpbf
— ANI_HindiNews (@AHindinews) November 26, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.