ನವದೆಹಲಿ: ಭಯೋತ್ಪಾದಕರ ಜೊತೆಗೆ ಸೇರಿ ಪಿತೂರಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪಿಡಿಪಿ (ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ) ನ ಯೂತ್ ವಿಂಗ್ ಪ್ರೆಸಿಡೆಂಟ್ ವಹೀದ್ ಉರ್ ರೆಹಮಾನ್ ಅನ್ನ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬಂಧಿಸಿದೆ. ಈತ ಮೆಹಬೂಬ ಮುಫ್ತಿ ಆಪ್ತನೂ ಆಗಿದ್ದಾನೆ.
ಜಮ್ಮು ಕಾಶ್ಮೀರದಲ್ಲಿ ಉಗ್ರರೊಂದಿಗೆ ಪಿತೂರಿ ನಡೆಸಿ ಅಮಾನತುಗೊಂಡಿರುವ ಡಿಎಸ್ಪಿ ದೇವೀಂದರ್ ಸಿಂಗ್ ಪ್ರಕರಣದಲ್ಲಿ ನಂಟು ಹೊಂದಿರುವ ಆರೋಪದಲ್ಲಿ ವಹೀದ್ ನನ್ನು ಕಳೆದ ಎರಡು ದಿನಗಳ ಹಿಂದೆ ವಶಕ್ಕೆ ಪಡೆದುಕೊಂಡು ಎನ್ಐಎ, ದೆಹಲಿಯ ಕೇಂದ್ರ ಕಛೇರಿಯಲ್ಲಿ ವಿಚಾರಣೆ ನಡೆಸುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಕೆಲ ಸಮಯದ ಹಿಂದೆ ಉಗ್ರಗಾಮಿಗಳಿಗೆ ಹಣದ ನೆರವು ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎನ್ಐಎ ಜಮ್ಮು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ವಹೀದ್ ಹೆಸರು ಸಹ ಕೇಳಿ ಬಂದಿತ್ತು. ಸದ್ಯ ಈತನನ್ನು ಬಂಧನಕ್ಕೊಳಪಡಿಸಲಾಗಿದೆ. ಬಂಧಿತ ಆರೋಪಿಯನ್ನು ಮೆಹಬೂಬ್ ಮುಫ್ತಿ ಅವರ ಆಪ್ತ ಎಂದು ಹೇಳಲಾಗುತ್ತಿದೆ. ಈತನ ಮೇಲೆ ಎನ್ಐಎ ಕೆಲ ದಿನಗಳಿಂದ ಕಣ್ಣಿಟ್ಟಿತ್ತು. ಜೊತೆಗೆ ವಹೀದ್ ಮತ್ತು ಹಿಜ್ಬುಲ್ ನಡುವೆ ನಂಟಿದೆ ಎಂಬ ಶಂಕೆಯನ್ನು ಸಹ ಎನ್ಐಎ ಹೊಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.